ADVERTISEMENT

`ಎಲೆಕ್ಷನ್'ನಲ್ಲಿ ಮಾಲಾಶ್ರೀ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2012, 8:31 IST
Last Updated 30 ನವೆಂಬರ್ 2012, 8:31 IST

`ಎಲೆಕ್ಷನ್' ಹೆಸರಿನ ಚಿತ್ರವನ್ನು ರಾಮು ನಿರ್ಮಿಸುತ್ತಿದ್ದಾರೆ. ಓಂ ಪ್ರಕಾಶ್ ರಾವ್ ನಿರ್ದೇಶನದ ಈ ಚಿತ್ರದ ನಾಯಕಿ ಮಾಲಾಶ್ರೀ. ಡಿ.7ರಂದು ಚಿತ್ರ ಆರಂಭವಾಗಲಿದೆ. ಹಂಸಲೇಖ ಸಾಹಿತ್ಯ- ಸಂಗೀತ ನೀಡಲಿರುವ ಈ ಚಿತ್ರದ ಛಾಯಾಗ್ರಾಹಕ ರಾಜೇಶ್, ಸಂಕಲನಕಾರ ಮನೋಹರ್, ಸಂಭಾಷಣೆಕಾರ ಆನಂದ್. ಸರಿಗಮ ವಿಜಿ ಹಾಗೂ ಸೋಮರಾಜ್ ಸಹ ನಿರ್ದೇಶನ ಚಿತ್ರಕ್ಕಿದೆ.
ಪೋಷಕ ಪಾತ್ರಗಳಲ್ಲಿ ಶ್ರಿನಿವಾಸಮೂರ್ತಿ, ಲೋಕನಾಥ್, ಮೈಕೊ ನಾಗರಾಜ್, ಸುಚೀಂದ್ರಪ್ರಸಾದ್, ಶರತ್ ಲೋಹಿತಾಶ್ವ, ಸಾಧು ಕೋಕಿಲ, ಬುಲೆಟ್ ಪ್ರಕಾಶ್, ಶೋಭರಾಜ್ ಹಾಗೂ ಇತರರು ಅಭಿನಯಿಸಲಿದ್ದಾರೆ.
   
`ಅಂಬರ'ದ ಹಾಡು
ಆನಂದರಾಜ್ ನಿರ್ಮಿಸುತ್ತಿರುವ `ಅಂಬರ' ಚಿತ್ರಕ್ಕಾಗಿ ಮೋಹನ್ ಬರೆದಿರುವ `ಕಾಣದೇ ಕಾಣದೇ ಮನಸಿನ ನೋವು ಕೇಳದೇ ಕೇಳದೇ ಹೃದಯದ ನೋವು' ಎಂಬ ಹಾಡಿನ ಚಿತ್ರೀಕರಣ ಹೈದರಾಬಾದ್‌ನಲ್ಲಿ ನಡೆಯಿತು. ಮಾಲೂರು ಶ್ರಿನಿವಾಸ್ ನೃತ್ಯ ನಿರ್ದೇಶನ ಮಾಡಿದ ಈ ಗೀತೆಯ ಚಿತ್ರೀಕರಣದಲ್ಲಿ ಯೋಗೀಶ್, ಭಾಮಾ, ರಾಮಕೃಷ್ಣ, ಅರುಣಾ ಬಾಲರಾಜ್ ಭಾಗವಹಿಸಿದ್ದರು.

ಸೇನ್‌ಪ್ರಕಾಶ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ `ಅಂಬರ'ಕ್ಕೆ ನಾಗರಾಜ್ ಕೋಟೆ ಸಂಭಾಷಣೆ ಬರೆದಿದ್ದಾರೆ. ಅಭಿಮಾನ್ ರಾಯ್ ಸಂಗೀತ ನಿರ್ದೇಶನ, ಸಿನಿಟೆಕ್ ಸೂರಿ ಛಾಯಾಗ್ರಹಣ, ರವಿಕುಮಾರ್ ಸಂಕಲನ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ, ಯೋಗರಾಜ್ ಭರಣಿ ಸಹ ನಿರ್ದೇಶನ ಇದೆ. ಸಾಧು ಕೋಕಿಲಾ, ವಿಶ್ವ, ಬ್ಯಾಂಕ್ ಜನಾರ್ದನ್, ಜೈ ಜಗದೀಶ್, ಪದ್ಮಾ ವಾಸಂತಿ, ವಿನಾಯಕ ಜೋಶಿ ಉಳಿದ ಕಲಾವಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.