ತೆಲುಗು ನಿರ್ದೇಶಕ ರಾಜಮೌಳಿ ತುಂಬಾ ಖುಷಿಯಲ್ಲಿದ್ದಾರಂತೆ. ಅವರ ನಿರ್ದೇಶನದ `ಈಗ' ಸಿನಿಮಾಕ್ಕೆ 16ನೇ ಶಾಂಘೈ ಅಂತರರಾಷ್ಟ್ರೀಯ ಸಿನಿಮಾ ಉತ್ಸವದಲ್ಲಿ ಉತ್ತಮ ಪ್ರತಿಕ್ರಿಯೆ ದೊರತಿರುವುದು ಖುಷಿಗೆ ಕಾರಣ.
ಸತ್ತ ವ್ಯಕ್ತಿ `ನೊಣ'ವಾಗಿ ತನ್ನ ದ್ವೇಷವನ್ನು ತೀರಿಸಿಕೊಳ್ಳುವ `ಈಗ' ಜನರನ್ನು ಹೆಚ್ಚು ಆಕರ್ಷಿಸಿತ್ತು. ತಮಿಳು, ಹಿಂದಿ ಭಾಷೆಗಳಿಗೂ ಈ ಸಿನಿಮಾ ಡಬ್ ಆಗಿತ್ತು. ಇದೀಗ ಚೀನಾ ಸರದಿ. ಈ ವರ್ಷದ ಕೊನೆಯಲ್ಲಿ ಚೀನಾ ಮಂದಿಯೂ `ಈಗ' ವೀಕ್ಷಿಸಲಿದ್ದಾರೆ ಎಂದು ರಾಜಮೌಳಿ ತಮ್ಮ ಸಿನಿಮಾ ಕುರಿತು ಟ್ವೀಟ್ ಮಾಡಿದ್ದಾರೆ. ತೆಲುಗಿನಲ್ಲಿ `ಈಗ', ಹಿಂದಿಯಲ್ಲಿ `ಮಕ್ಕಿ', ತಮಿಳಿನಲ್ಲಿ `ನಾನ್ ಈ' ಎಂದೆಲ್ಲಾ ಶೀರ್ಷಿಕೆಗಳಿದ್ದ ಚಿತ್ರಕ್ಕೆ ಚೀನಾದಲ್ಲಿ ತಾತ್ಕಾಲಿಕವಾಗಿ `ಕುಂಗ್ ಫು ಹೌಸ್‌ಫ್ಲೈ` ಎಂಬ ಹೆಸರಿಟ್ಟಿದ್ದಾರಂತೆ.
ಜನರ ಭಾಷೆ, ಜಾತಿ, ಸಂಸ್ಕೃತಿ ಬೇರೆ ಇರಬಹುದು. ಆದರೆ ಭಾವನೆಗಳು ಒಂದೇ ರೀತಿಯಾಗಿರುತ್ತವೆ. ಚೀನಾದ ವೀಕ್ಷಕರು ಇದನ್ನು ಸ್ವೀಕರಿಸಬಹುದು ಎಂಬ ನಂಬಿಕೆ ನನಗಿದೆ ಎಂದು ಚಿತ್ರ ನಿರ್ದೇಶಕ ಹೇಳಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.