ವಿಜಯ್ ಆನಂದಕುಮಾರ್ ನಿರ್ಮಾಣದ `ಪದೇ ಪದೇ~ ಚಿತ್ರಕ್ಕೆ ಬೆಂಗಳೂರಿನ ಟೌನ್ ಹಾಲ್‌ನಲ್ಲಿ `ಮನಸಾಗಿದೆಯೇ, ಮನಸಾಗಿದೆಯೆ, ಯಾಕಾಗಿದೆಯೇ ನಾಕಾಣೆ, ಕನಸಾಗಿದೆಯೆ, ನನಸಾಗಿದೆಯೇ, ಏನಾಗಿದೆಯೋ ನಾಕಾಣೆ..~ ಎಂಬ ಹಾಡಿನ ಚಿತ್ರೀಕರಣ ಕಲೈ ನೃತ್ಯ ನಿರ್ದೇಶನದಲ್ಲಿ ನಡೆಯಿತು. ತರುಣ್, ಮೃದುಲಾ, ಅಖಿಲಾ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಈ ಚಿತ್ರದ ನಿರ್ದೇಶನ ಆರ್. ನಾಗರಾಜ್ ಪೀಣ್ಯ ಅವರದು. ಛಾಯಾಗ್ರಹಣ ಎಸ್. ಎಚ್.ರಮೇಶ್, ಸಂಗೀತ - ಸತೀಶ್ ಆರ್ಯನ್, ಸಂಕಲನ - ಸುರೇಶ್, ಸಂಭಾಷಣ್-ಗೌಸ್‌ಫೀರ್. ಉಳಿದಂತೆ ವೀಣಾ ಸುಂದರ್, ವಿಜಯ ಕಾಶಿ, ಸಂಕೇತ್ ಕಾಶಿ, ಗಿರಿಜಾ ಲೋಕೇಶ್, ಮೋಹನ್ ಜುನೇಜಾ, ಕಾರ್ತಿಕ್ ಮುಂತಾದವರು ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.