ADVERTISEMENT

ಪ್ರತಿಭೆ ಇದ್ದರೆ ನೀವು ನಿಮ್ಮನ್ನೇ ಮಾರಿಕೊಳ್ಳುವ ಅಗತ್ಯವೇನಿದೆ?: ಸರೋಜ್ ಖಾನ್

ಏಜೆನ್ಸೀಸ್
Published 24 ಏಪ್ರಿಲ್ 2018, 12:13 IST
Last Updated 24 ಏಪ್ರಿಲ್ 2018, 12:13 IST
ಸರೋಜ್ ಖಾನ್ (ಕೃಪೆ: ಟ್ವಿಟರ್)
ಸರೋಜ್ ಖಾನ್ (ಕೃಪೆ: ಟ್ವಿಟರ್)   

ನವದೆಹಲಿ: ಖ್ಯಾತ ನೃತ್ಯ ಸಂಯೋಜಕಿ ಸರೋಜ್ ಖಾನ್ ಕಾಸ್ಟಿಂಗ್ ಕೌಚ್ (ಲೈಂಗಿಕ ಕಿರುಕುಳ) ಸಮರ್ಥಿಸಿ ಹೇಳಿಕೆ ನೀಡುವ ಮುೂಲಕ ಸುದ್ದಿಯಾಗಿದ್ದಾರೆ. ಮಂಗಳವಾರ ಮುಂಬೈನಲ್ಲಿ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ ಸರೋಜ್ ಖಾನ್ ಕಾಸ್ಟಿಂಗ್ ಕೌಚ್ ಅಂದರೆ ಸಿನಿಮಾರಂಗದಲ್ಲಿ ಕೆಲಸ ಮಾಡುವುದಕ್ಕಾಗಿ ಲೈಂಗಿಕ ಸಹಕಾರದ ವಿನಿಮಯ. ಇದು ಈಗ ಶುರುವಾದದ್ದು ಏನೂ ಅಲ್ಲ, ಈ ಹಿಂದಿನಿಂದಲೇ ಇದೆ. ನೀವು ಯಾಕೆ ಸಿನಿಮಾ ರಂಗವನ್ನು ಮಾತ್ರ ಟಾರ್ಗೆಟ್ ಮಾಡುತ್ತೀರಿ? ಇದೆಲ್ಲ ನಿಮಗೆ ಹೊಟ್ಟೆಗೆ ಅನ್ನ ನೀಡುತ್ತದೆಯಲ್ಲವೇ? ಅತ್ಯಾಚಾರ ಮಾಡಿ ಎಸೆಯುವುದಿಲ್ಲವಲ್ಲಾ ಎಂದು ಪ್ರಶ್ನಿಸಿದ್ದಾರೆ.

ತೆಲುಗು ನಟಿ ಶ್ರೀ ರೆಡ್ಡಿ ಕಾಸ್ಟಿಂಗ್ ಕೌಚ್ ಬಗ್ಗೆ  ದನಿಯೆತ್ತಿ ಅರೆನಗ್ನ ಪ್ರತಿಭಟನೆ ಮಾಡಿದ ವಿಷಯದ ಬಗ್ಗೆ ಮಾಧ್ಯಮದವರು ಪ್ರಶ್ನೆ ಕೇಳಿದಾಗ ಸರೋಜ್ ಖಾನ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT