ಬದುಕನ್ನು ಗೌರವಿಸುವುದನ್ನು ಕಲಿಯಬೇಕು. ಅದಕ್ಕಿಂತ ದೊಡ್ಡದು ಬೇರೊಂದಿಲ್ಲ ಎಂದು ಬಾಲಿವುಡ್ ನಟ ಶಾರುಖ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.
`ಪ್ರತಿಯೊಬ್ಬರೂ ಪ್ರೀತಿಗೆ ತಮ್ಮದೇ ಆದ ವ್ಯಾಖ್ಯಾನ ಕೊಡುತ್ತಾರೆ.
ಹಾಗೆಂದ ಮಾತ್ರಕ್ಕೆ ಅದೇ ದೊಡ್ಡದಲ್ಲ. ನಮ್ಮೆಲ್ಲರಿಗೂ ಬದುಕು ಬಹಳ ಮುಖ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಯುವಜನತೆ ಪ್ರೀತಿಗೆ ಹೆಚ್ಚಿನ ಮಹತ್ವ ನೀಡಿ, ಅದು ವಿಫಲವಾದಾಗ ಬದುಕು ಕಳೆದುಕೊಳ್ಳುವುದು ದುರದೃಷ್ಟಕರ' ಎನ್ನುವುದು ಎಸ್‌ಆರ್‌ಕೆ ಅನಿಸಿಕೆ.
`ಪ್ರೀತಿ ಎಂಬುದಕ್ಕೆ ಮಿತಿಯೂ ಇಲ್ಲ. ಅದರ ವ್ಯಾಪ್ತಿ ಯಾರಿಗೂ ತಿಳಿದಿಲ್ಲ. ಆದರೆ ಅದು ಬದುಕಿನ ಭಾಗವೇ ಹೊರತು, ಬದುಕಿಗಿಂತ ದೊಡ್ಡದಲ್ಲ ಎನ್ನುವುದನ್ನು ಮನಗಾಣಬೇಕಿದೆ' ಎಂದು ಶಾರುಖ್ ಕಿವಿ ಮಾತು ಹೇಳಿದ್ದಾರೆ.
`ಚೆನ್ನೈ ಎಕ್ಸ್‌ಪ್ರೆಸ್' ಚಿತ್ರದ ಪ್ರಚಾರದ ವೇಳೆ ಜಿಯಾ ಖಾನ್ ಆತ್ಮಹತ್ಯೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಶಾರುಖ್ ಬದುಕು ಹಾಗೂ ಪ್ರೀತಿಯ ಮಹತ್ವವನ್ನು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.