ADVERTISEMENT

‘ಬಾಹುಬಲಿ–2’ ವಿಭಿನ್ನ ಸನ್ನಿವೇಶಗಳಿಂದ ಕೂಡಿದೆ: ರಾಣ ದಗ್ಗುಬಾಟಿ

ಪಿಟಿಐ
Published 13 ಅಕ್ಟೋಬರ್ 2016, 14:26 IST
Last Updated 13 ಅಕ್ಟೋಬರ್ 2016, 14:26 IST
ರಾಣ ದಗ್ಗುಬಾಟಿ
ರಾಣ ದಗ್ಗುಬಾಟಿ   

ಮುಂಬೈ: ಭಾರತದ ಬಹು ನಿರೀಕ್ಷಿತ ಸಿನಿಮಾ ‘ಬಾಹುಬಲಿ–2’ ಮೊದಲ ಭಾಗಕ್ಕಿಂತಲ್ಲೂ ವಿಭಿನ್ನ ಸನ್ನಿವೇಶಗಳನ್ನು ಒಳಗೊಂಡು ನಿರ್ಮಾಣವಾಗುತ್ತಿರುವ ಬಹುಭಾಷಾ ಚಿತ್ರವಾಗಿದ್ದು, ಚಿತ್ರ ಪ್ರೇಕ್ಷಕರ ನಿರೀಕ್ಷೆಗೂ ಮೀರಿದಂತೆ ಹೆಚ್ಚು ಆಕರ್ಷಣಿವಾಗಿರಲ್ಲಿದೆ ಎಂದು ನಟ ರಾಣ ದಗ್ಗುಬಾಟಿ ಅಭಿಪ್ರಾಯಪಟ್ಟಿದ್ದಾರೆ.

ಹೆಸರಾಂತ ನಿರ್ದೇಶಕ ಎಸ್‌.ಎಸ್‌. ರಾಜ್‌ಮೌಳಿ ನಿರ್ದೇಶನದಲ್ಲಿ ಬಾಹುಬಲಿ ಚಿತ್ರ ನಿರ್ಮಾಣವಾಗುತ್ತಿದ್ದು, ಬಾಹುಬಲಿ ಚಿತ್ರದ ಮೊದಲಾರ್ಧ ಭಾಗದಲ್ಲಿ ನಟಿಸಿದ ರಾಣ ದಗ್ಗುಬಾಟಿ, ಪ್ರಭಾಸ್‌, ತಮನ್ನಾ ಚಿತ್ರದ ಎರಡನೇ ಭಾಗದಲ್ಲಿಯು ಕಾಣಿಸಿಕೊಳ್ಳಲ್ಲಿದ್ದಾರೆ.

‘ಬಾಹುಬಲಿ–2’ ಮೊದಲ ಭಾಗಕ್ಕಿಂತಲ್ಲೂ ವಿಭಿನ್ನ ಸನ್ನಿವೇಶಗಳನ್ನು ಒಳಗೊಂಡು ನಿರ್ಮಾಣವಾಗುತ್ತಿದ್ದು, ಸಿನಿಮಾ ಪ್ರೇಕ್ಷಕರ ನಿರೀಕ್ಷೆಗೂ ಮೀರಿದಂತೆ ಹೆಚ್ಚು ಆಶ್ಚರ್ಯಕರಕವಾಗಿರಲ್ಲಿದೆ ಎಂದು ನಟ ರಾಣ ಪಿಟಿಐ ಸಂರ್ದಶನದಲ್ಲಿ ತಿಳಿಸಿದ್ದಾರೆ.

ADVERTISEMENT

ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ? ಎಂಬ ಪ್ರೇಕ್ಷಕರ ಪ್ರಶ್ನೆಗೆ ಬಾಹುಬಲಿ–2ರಲ್ಲಿ ಉತ್ತರ ಸಿಗಲ್ಲಿದೆ ಎಂದರು. ಜತೆಗೆ, ಬಾಹುಬಲಿ– 2 ಚಿತ್ರಕ್ಕಾಗಿ ತಾವು 6ರಿಂದ 8 ತಿಂಗಳು ದೇಹವನ್ನು ದಂಡಿಸಿದ್ದು, ಚಿತ್ರದ ಯಶಸ್ಸಿಗೆ ಚಿತ್ರ ತಂಡ ಕಠಿಣ ಪರಿಶ್ರಮ ಪಡುತ್ತಿದೆ ಎಂದರು.

‘ಬಾಹುಬಲಿ–2’ ಚಿತ್ರ ನಿರ್ಮಾಣದ ಹಂತದಲ್ಲಿದ್ದು,  2017ರ ಏಪ್ರಿಲ್‌ 28ರಂದು ವಿಶ್ವದಾಂದ್ಯತ ಚಿತ್ರ ಬಿಡುಗಡೆಯಾಗಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.