`ಬೊಂಬೆ ಆಡ್ಸೋನು ಮೇಲೆ ಕುಂತವ್ನೆ, ಯಾಕೆ ಇಲ್ಲಿ ನಮಗೆ, ನಿಮಗೆ ಟೆನ್ಷನ್~. `ಡ್ರಾಮಾ~ ಸಿನಿಮಾದ ಶೀರ್ಷಿಕೆ ಗೀತೆಯನ್ನು ಕೇಳುತ್ತಿದ್ದ ನಿರ್ದೇಶಕ ಯೋಗರಾಜ್ ಭಟ್ ಅವರಿಗೆ, ಈ ಗೀತೆಯ ಭಾವ ಅಂಬರೀಷ್ ಅವರ ವ್ಯಕ್ತಿತ್ವಕ್ಕೂ ಹೊಂದುತ್ತದೆ ಅನ್ನಿಸಿತು. ಅದೇ ಟ್ರ್ಯಾಕ್‌ಗೆ ಅಂಬರೀಶ್ ವ್ಯಕ್ತಿತ್ವ - ವೃತ್ತಿ ಬದುಕು ಕುರಿತು ಸಾಲು ಹೊಂದಿಸತೊಡಗಿದರು. ಹಾಡು ಮುಗಿದಾಗ ಏನೋ ಒಂಥರಾ...
ಭಟ್ಟರ ಹಾಡನ್ನು ಅಂಬರೀಶ್ ಕೇಳಿದ್ದಾರೆ, ಮೆಚ್ಚಿಕೊಂಡಿದ್ದಾರೆ. ಮೇ 29ರ `ಅಂಬಿ ಸಂಭ್ರಮ~ ಸಮಾರಂಭದಲ್ಲಿ ಈ ಗೀತೆಗೆ ಕಲಾವಿದರು ಹೆಜ್ಜೆ ಹಾಕಲಿದ್ದಾರೆ. ಅಂದಹಾಗೆ, ಭಟ್ಟರ ಈ ಗೀತೆ ಷಷ್ಟ್ಯಬ್ಧಿ ಕಿಶೋರನಿಗೆ `ಡ್ರಾಮಾ~ ತಂಡದ ಉಡುಗೊರೆ.
========
ನಮ್ಮ ನಾಡಿನ ಕೀರ್ತಿ ಪುರುಷ
ಬಾಳಬೇಕಯ್ಯ ಕೋಟಿ ವರುಷ
ಮಂಡ್ಯದ ಚಂದಮಾಮ ಅಂಬ್ರೀಶಣ್ಣಯ್ಯ
ಕರುನಾಡ ಮಾಸ್ಟರ್ ಪೀಸು ಬ್ಯಾರೆ ಇಲ್ಲಯ್ಯ
ಇವ್ನ ಒಂಟಿ ಸಲಗ, ಕರ್ಣನಂಥ ಗೆಳೆಯ
ದಾನ ಧರುಮದಲ್ಲೂ ತುಂಬಾ ದೊಡ್ಡ ಹೃದಯ
ಕಾವೇರಿ ದಂಡೆಯಲ್ಲಿ ಮುದ್ದೆ ತಿಂದ ಹೈದ
ಡೆಲ್ಲೆನ ಎಡಗೈಲೀ ಅಲ್ಲಾಡಿಸಿ ಬಂದ
ಪಿಟೀಲು ಚೌಡಯ್ಯನವರ ವಂಶದ ಬಳ್ಳಿಯ `ಹೂ~ವಯ್ಯ
ರೆಬಲ್ಲು ಸ್ಟಾರು ಆದ್ರು ಎಷ್ಟು ಸಿಂಪಲ್ ನೋಡಯ್ಯ
ಅರವತ್ತು ಆದ್ರು ಪುಟ್ಟ ಪಾಪು ಇವನಯ್ಯ
ಇವತ್ತು ಫೈಟಿಂಗ್‌ನಲ್ಲೂ ನಂಬರ್ ವನ್ ಇವನಯ್ಯ
ಚಿತ್ರ ಬ್ರಹ್ಮಾಂಡದಲ್ಲಿ ತೇಲುತ್ತಿವೆ ತಾರೆಗಳು
ಅಂಬ್ರೀಶಣ್ಣ ನೆಲದ ಮೇಲಿರುವ ನಕ್ಷತ್ರ
ಮಾತು ಡೈರೆಕ್ಟಪ್ಪ ಮನಸ್ಸು ಪರ್‌ಫೆಕ್ಟಪ್ಪ
ಅದಕ್ಕಾಗಿ ಮಂದಿಗೆ ಇವರು ತುಂಬ ಹತ್ರ
ಇಂಥ ಅಜಾತಶತ್ರು ಇಂಡಿಯಾದಲ್ಲೇ ಇಲ್ಲಯ್ಯ
ಇನ್ನೆಷ್ಟು ಜನ್ಮ ಇದ್ರು ಕರುನಾಡಲ್ಲಿ ಹುಟ್ಟಯ್ಯ
ಬೇರೇನು ಬೇಡ ನಮಗೆ ಇಲ್ಲಿ ಕೇಳಯ್ಯ
ನಿನ್ನಂಥ ಅಣ್ಣ ಇದ್ರೆ ಅಷ್ಟು ಸಾಕಯ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.