ADVERTISEMENT

ಮತ್ತೆ ಛೋಟಾಗಳ ಆಟ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2014, 19:30 IST
Last Updated 13 ಮಾರ್ಚ್ 2014, 19:30 IST
ಸೃಜನ್ ಲೋಕೇಶ್
ಸೃಜನ್ ಲೋಕೇಶ್   

ಸೃಜನ್ ಲೋಕೇಶ್ ನಿರೂಪಣೆಯಲ್ಲಿ ಮೂಡಿಬಂದ ‘ಛೋಟಾ ಚಾಂಪಿಯನ್’ನ ಮೊದಲ ಸೀಜನ್ ಕಾರ್ಯಕ್ರಮದ ಯಶಸ್ಸು ‘ಝೀ ಕನ್ನಡ’ ವಾಹಿನಿಗೆ ಖುಷಿ ನೀಡಿದೆ. ಈ ಹಿನ್ನೆಲೆಯಲ್ಲಿ ಎರಡನೇ ‘ಛೋಟಾ ಚಾಂಪಿಯನ್’ ಎರಡನೇ ಋತುವಿನ ಸಿದ್ಧತೆಗಳು ನಡೆದಿವೆ.

‘ಛೋಟಾ ಚಾಂಪಿಯನ್ ಸೀಜನ್–-೨’ ಕಾರ್ಯಕ್ರಮಕ್ಕಾಗಿ ನಡೆಸಲಾದ ಆಡಿಷನ್‌ನಲ್ಲಿ ಎರಡು ಸಾವಿರಕ್ಕೂ ಹೆಚ್ಚು ಕುಟುಂಬಗಳು ತಮ್ಮ ಮಕ್ಕಳನ್ನು ಕರೆತಂದು ಪಾಲ್ಗೊಂಡ ಸಂತಸ ಹಂಚಿಕೊಂಡಿದ್ದು ವಾಹಿನಿಯ ಮನೋರಂಜನಾ ವಿಭಾಗದ ಮುಖ್ಯಸ್ಥ ಬಾಲರಾಜ್. ‘ಬೆಂಗಳೂರಿನಲ್ಲಂತೂ ಎಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜನರು ಬಂದರೆಂದರೆ ನಾವು ಎರಡನೇ ಸಲ ಆಡಿಷನ್ ಅನ್ನು ಇಟ್ಟುಕೊಳ್ಳಬೇಕಾಗಿ ಬಂತು’ ಎಂದು ಮಾಹಿತಿ ನೀಡಿದರು.

‘ಇದು ಖಂಡಿತ ಸ್ಪರ್ಧೆ ಅಲ್ಲ. ಶುದ್ಧ ಮನರಂಜನೆ’ ಎಂದು ಸ್ಪಷ್ಟಪಡಿಸಿದ ನಿರೂಪಕ ಸೃಜನ್, ಈ ಸಲದ ಕಂತುಗಳು ವೀಕ್ಷಕರಿಗೆ ಹೊಸ ಅನುಭವ ಕೊಡಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಹಿಂದಿನ ಸಂಚಿಕೆಗಳಲ್ಲಿ ಮಗುವಿನ ತಂದೆ ಹಾಗೂ ತಾಯಿ ಆಟವಾಡುತ್ತಿದ್ದರು. ಆದರೆ ಈ ಸಲ ಇಡೀ ಪರಿವಾರ ಮಗುವಿನ ಜತೆ ಆಡುವ ಕಾರ್ಯಕ್ರಮ ರೂಪಿಸಲಾಗಿದೆ.

ಎರಡರಿಂದ ಮೂರೂವರೆ ವರ್ಷದೊಳಗಿನ ಮಕ್ಕಳನ್ನು ಇದಕ್ಕಾಗಿ ಆಯ್ದುಕೊಳ್ಳಲಾಗುವುದು ಎಂದ ಸೃಜನ್, ವ್ಯಾಪಾರಿ ಉದ್ದೇಶವಿಲ್ಲದೇ ಇಂಥ ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಿದ ವಾಹಿನಿಗೆ ಕೃತಜ್ಞತೆ ಸಲ್ಲಿಸಿದರು.
ಮಾರ್ಚ್ ೨೨ರಿಂದ ಛೋಟಾ ಚಾಂಪಿಯನ್‌ಗಳು ಮತ್ತೆ ಕಿರುತೆರೆಯಲ್ಲಿ ಮಿಂಚಲಿದ್ದಾರೆ.
ಸಮಯ: ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ ೯ ಗಂಟೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.