ADVERTISEMENT

ಮಾತನಾಡುತ್ತಿದ್ದಾನೆ ಮಂಜುನಾಥ...

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2012, 19:30 IST
Last Updated 23 ಫೆಬ್ರುವರಿ 2012, 19:30 IST

ಎ.ಗಣೇಶ್ ನಿರ್ಮಿಸುತ್ತಿರುವ `ಮಂಜುನಾಥ ಬಿ.ಎ.ಎಲ್.ಎಲ್.ಬಿ~ ಚಿತ್ರಕ್ಕೆ ರಾಜೇಶ್‌ರಾಮನಾಥ್ ಸ್ಟುಡಿಯೋದಲ್ಲಿ ಮಾತಿನ ಜೋಡಣೆ ನಡೆಯುತ್ತಿದೆ. ಜಗ್ಗೇಶ್ ನಾಯಕರಾಗಿ ನಟಿಸುತ್ತಿರುವ ಚಿತ್ರವನ್ನು ಮೋಹನ್ ನಿರ್ದೇಶಿಸುತ್ತಿದ್ದಾರೆ.
 
ಸಂಭಾಷಣೆ ಕೂಡ ಇವರದೇ. ರೀಮಾ ವೋರಾ ನಾಯಕಿಯಾಗಿರುವ ಈ ಚಿತ್ರದ ತಾರಾಬಳಗದಲ್ಲಿ ಕರಿಬಸವಯ್ಯ, ಸ್ವಸ್ತಿಕ್ ಶಂಕರ್, ಗಿರಿಜಾ ಲೋಕೇಶ್, ಶಂಕರ್ ಪಾಟೀಲ್, ಚಿದಾನಂದ್ ಮುಂತಾದವರಿದ್ದಾರೆ.

ವಿನಯ್‌ಚಂದ್ರ ಸಂಗೀತ ನಿರ್ದೇಶನದ ಚಿತ್ರಕ್ಕೆ ಅಶೋಕ್ ಅವರ ಛಾಯಾಗ್ರಹಣವಿದೆ. ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಸನತ್ ಸಂಕಲನ, ಬಾಬುಖಾನ್ ಅವರ ಕಲಾ ನಿರ್ದೇಶನವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.