ADVERTISEMENT

ರೆಹಮಾನ್‌ಗೆ ಸವಾಲೊಡ್ಡಿದ ‘ಕೊಚಾಡಿಯನ್’

ಪಂಚರಂಗಿ

​ಪ್ರಜಾವಾಣಿ ವಾರ್ತೆ
Published 27 ಮೇ 2014, 19:30 IST
Last Updated 27 ಮೇ 2014, 19:30 IST
ರೆಹಮಾನ್‌ಗೆ ಸವಾಲೊಡ್ಡಿದ ‘ಕೊಚಾಡಿಯನ್’
ರೆಹಮಾನ್‌ಗೆ ಸವಾಲೊಡ್ಡಿದ ‘ಕೊಚಾಡಿಯನ್’   

ಎ.ಆರ್‌.ರೆಹಮಾನ್‌ ಸಾವಿರಾರು ಇಂಪಾದ ಹಾಡುಗಳನ್ನು ನೀಡಿದ ಸಂಗೀತಗಾರ. ಈಗಾಗಲೇ ಎರಡು ಆಸ್ಕರ್‌ ಪ್ರಶಸ್ತಿಗಳು ಇವರಿಗೆ ಸಂದಿವೆ. ಭಾರತೀಯ ಸಿನಿಮಾ ಸಂಗೀತ ಕ್ಷೇತ್ರದಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವ ಇವರಿಗೆ ಇತ್ತೀಚೆಗೆ ತೆರೆಕಂಡ ‘ಕೊಚಾಡಿಯನ್‌’ ಸಿನಿಮಾಕ್ಕೆ ಸಂಗೀತ ಸಂಯೋಜನೆ ಮಾಡುವುದು ಸವಾಲು ಎನಿಸಿತ್ತಂತೆ. ಸಿನಿಮಾದ ವಿಶಿಷ್ಟ ಕಥಾ ನಿರೂಪಣೆಗೆ ತಕ್ಕಂತೆ ಸಂಗೀತ ಸಂಯೋಜನೆ ಮಾಡುವುದು ತುಂಬಾ ಕಷ್ಟದ ಕೆಲಸವಾಗಿ ಪರಿಣಮಿಸಿತ್ತಂತೆ.

‘ಕೊಚಾಡಿಯನ್ ಸಿನಿಮಾಗೆ ಸಂಗೀತ ನಿರ್ದೇಶಿಸುವುದು ನಿಜಕ್ಕೂ ಕಷ್ಟವೆನಿಸಿತು. ಕಥಾ ನಿರೂಪಣೆಯೊಂದಿಗೇ ಸಂಗೀತವೂ ಸಾಗಬೇಕಿದ್ದರಿಂದ ಜವಾಬ್ದಾರಿ ಹೆಚ್ಚಾಗಿತ್ತು. ಕೆಲವು ಸೂಕ್ಷ್ಮ ವಿಷಯಗಳನ್ನು ಆಧರಿಸಿ ಮುಂದಡಿ ಇಟ್ಟರೂ ಇನ್ನೂ ಕೆಲವು ಸಂದರ್ಭಗಳಲ್ಲಿ ಹಿಂದಡಿ ಇಡಬೇಕಿತ್ತು. ನಿಜವಾಗಿಯೂ ತುಂಬಾ ಸವಾಲೆನಿಸಿದ ಚಿತ್ರವಿದು’ ಎಂದು ರೆಹಮಾನ್‌ ಫೇಸ್‌ಬುಕ್‌ನಲ್ಲಿ ಮನದ ಇಂಗಿತವನ್ನು ಹಂಚಿಕೊಂಡಿದ್ದಾರೆ.

ರಜನಿಕಾಂತ್‌ ಅವರ ಮಗಳು ಸೌಂದರ್ಯ ಅಶ್ವಿನ್‌ ನಿರ್ದೇಶನದ ಕೊಚಾಡಿಯನ್‌ ಸಿನಿಮಾ ಈಗಾಗಲೇ 42 ಕೋಟಿ ಲಾಭ ಗಳಿಸಿದೆ. ಇದು ಭಾರತದಲ್ಲಿ ಮೊದಲ ಬಾರಿಗೆ ತಯಾರಿಸಲಾದ 3ಡಿ ಅನಿಮೇಟೆಡ್‌ ಫೋಟೊ ರಿಯಲಿಸ್ಟಿಕ್‌ ಸಿನಿಮಾ. ದೀಪಿಕಾ ಪಡುಕೋಣೆ, ಜಾಕಿಶ್ರಾಫ್‌, ಆರ್‌. ಶರತ್ ಕುಮಾರ್‌, ನಸೀರ್‌, ಆದಿ ಪಿನಿಸೆಟ್ಟಿ ಹಾಗೂ ಶೋಭನಾ ಮುಂತಾದವರು ತಾರಾಗಣದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.