
ಬಾಲಿವುಡ್ ನಟ ಸಂಜಯ್ ದತ್ ಜೀವನ ಕತೆಯಧಾರಿಸಿದ ‘ಸಂಜು’ ಚಿತ್ರದ ಬಗ್ಗೆ ಅಭಿಮಾನಿಗಳ ನಿರೀಕ್ಷೆ ಗರಿಗೆದರಿದೆ. ಈ ಚಿತ್ರದಲ್ಲಿ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅವರು ಸಂಜಯ್ ಜೀವನದ ಯಾವ ಯಾವ ಅಂಶಗಳು ತೆರೆ ಮೇಲೆ ತೋರಿಸಲಿದ್ದಾರೆ ಎಂಬ ಕುತೂಹಲ ಪ್ರೇಕ್ಷಕರಲ್ಲಿದೆ.
ಚಿತ್ರದ ಪೋಸ್ಟರ್ ಹಾಗೂ ಟ್ರೇಲರ್‌ಗಳು ಬಿಡುಗಡೆಯಾಗಿದ್ದು, ಅವೂ ಸಹ ನಿರೀಕ್ಷೆಯನ್ನು ಹೆಚ್ಚು ಮಾಡಿತ್ತು.
ಈಗ ಈ ಚಿತ್ರದ ಕರ್ ಕರ್ ಮೈದಾನ್ ಫತ್ತೆ’ಹಾಡು ಬಿಡುಗಡೆಯಾಗಿದೆ. ಈ ಹಾಡನ್ನು ಸುಖ್ವಿಂದರ್ ಸಿಂಗ್ ಹಾಗೂ ಶ್ರೇಯಾ ಘೋಷಾಲ್ ಹಾಡಿದ್ದಾರೆ. ಈ ಹಾಡಿನಲ್ಲಿ ಡ್ರಗ್ ಅಡಿಕ್ಟ್ ಆದ ಸಂಜಯ್ ದತ್ ಅದರಿಂದ ಹೊರಬರಲು ಹೋರಾಟ ನಡೆಸುತ್ತಿರುವ ದೃಶ್ಯಾವಳಿಗಳನ್ನು ತೋರಿಸಲಾಗಿದೆ. ಸಂಜಯ್‌ನ ಗಟ್ಟಿ ನಿರ್ಧಾರವನ್ನು ಈ ಹಾಡಿನಲ್ಲಿ ಸ್ಪೂರ್ತಿದಾಯಕವಾಗಿ ತೋರಿಸಲಾಗಿದೆ. ಈ ಹಾಡನ್ನು 14 ಲಕ್ಷ ಜನ ವೀಕ್ಷಣೆ ಮಾಡಿದ್ದಾರೆ.
ಈ ಹಾಡಿನಲ್ಲಿ ಸಂಜಯ್ ದತ್ ಸಿನಿಮಾನಾಯಕನಾಗುವುದು, ಸ್ಟಾರ್ ಪಟ್ಟ ಗಿಟ್ಟಿಸಿಕೊಳ್ಳುವುದು, ಜೈಲು ಸೇರುವುದು ಮೊದಲಾದಗಳ ದೃಶ್ಯಗಳು ಚಿತ್ರದ ಬಗ್ಗೆ ನಿರೀಕ್ಷೆಯನ್ನು ಹೆಚ್ಚು ಮಾಡುತ್ತವೆ. ಕೆಲ ದೃಶ್ಯಗಳಲ್ಲಿ ಸಂಜಯ್ ದತ್ ಅಭಿನಯದ ಸಿನಿಮಾ ದೃಶ್ಯಗಳನ್ನೇ ಬಳಸಲಾಗಿದೆ. ಸಂಜಯ್ ಪಾತ್ರದಲ್ಲಿ ರಣಬೀರ್ ಅಭಿನಯ ಮನೋಜ್ಞವಾಗಿದೆ.
ಈ ಚಿತ್ರ ಜೂನ್ 29ರಂದು ಬಿಡುಗಡೆಯಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.