ADVERTISEMENT

ಸಿಡಿಲ ಮರಿಯ ಹೊಡೆದಾಟ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2012, 19:30 IST
Last Updated 9 ಆಗಸ್ಟ್ 2012, 19:30 IST

`ಸಿಡಿಲ ಮರಿ~ಯ ಹೊಡೆದಾಟ
ಹಬೀಬ್ ನಿರ್ಮಾಣದ `ಸಿಡಿಲ ಮರಿ~ ಚಿತ್ರಕ್ಕೆ ಕುಣಿಗಲ್ ರಸ್ತೆಯ ಫಾರಂ ಹೌಸ್ ಒಂದರಲ್ಲಿ ಚಿತ್ರೀಕರಣ ನಡೆಯಿತು. ಆಯೆಷಾ ಹಾಗೂ ಶರತ್‌ಲೋಹಿತಾಶ್ವ ಗ್ಯಾಂಗ್‌ನೊಂದಿಗೆ ಹೊಡೆದಾಡುವ ದೃಶ್ಯವನ್ನು ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ನೇತೃತ್ವದಲ್ಲಿ ಸೆರೆ ಹಿಡಿಯಲಾಯಿತು.
 
ಚಿತ್ರದ ಕಥೆ, ಚಿತ್ರಕಥೆ, ನಿರ್ದೇಶನ ರಘುರಾಜ್, ಸಂಭಾಷಣೆ ಬಿ.ಎ. ಮಧು, ಛಾಯಾಗ್ರಹಣ ಜನಾರ್ದನ್, ಸಂಗೀತ ಎಂ.ಎನ್ ಕೃಪಾಕರ್ ಅವರದ್ದು. ತಾರಾಗಣದಲ್ಲಿ ಅಯೆಷಾ, ಜೈಜಗದೀಶ್, ಶರತ್ ಲೋಹಿತಾಶ್ವ, ಸತ್ಯಜಿತ್,  ಶಿಲ್ಪಾ, ಪೆಟ್ರೋಲ್ ಪ್ರಸನ್ನ  ಜಯಲಕ್ಷ್ಮಿ ಪಾಟೀಲ್, ಸಿದ್ಧರಾಜು ಕಲ್ಯಾಣ್‌ಕರ್, ಮೈಸೂರು ಮಂಜುಳ ಮತ್ತಿತರರು ಇದ್ದಾರೆ.

ಕಾಲೇಜಿನಲ್ಲಿ ಜಿದ್ದಾ ~ಜಿದ್ದಿ~

ಅಮರಚಂದ್‌ಜೈನ್ ಹಾಗೂ ವಿಜಯ್ ಸುರಾನ ನಿರ್ಮಿಸುತ್ತಿರುವ ಜಿದ್ದಿ ಚಿತ್ರ ಕಳೆದ ವಾರ ಕೆಂಗೇರಿ ಬಳಿಯ ಬಿಜಿಎಸ್ ಕಾಲೇಜಿನಲ್ಲಿ ಆರಂಭವಾಯಿತು. ನಾಯಕಿ ನಾಯಕನಿಗೆ ಆಲ್ ದಿ ಬೆಸ್ಟ್ ಹೇಳುವ ಪ್ರಥಮ ದೃಶ್ಯಕ್ಕೆ ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಆರಂಭ ಫಲಕ ತೋರಿದರು.

ಪ್ರಜ್ವಲ್‌ದೇವರಾಜ್ ನಾಯಕರಾಗಿ ನಟಿಸುತ್ತಿರುವ ಚಿತ್ರದಲ್ಲಿ ಐಂದ್ರಿತಾ ರೇ ಹಾಗೂ ಐಶ್ವರ್ಯನಾಗ್ ನಾಯಕಿಯರಾಗಿ ಅಭಿನಯಿಸುತ್ತಿದ್ದಾರೆ. ಬಿಂಬಿಕಾ, ಅಶೋಕ್, ಶ್ರೀನಿವಾಸಮೂರ್ತಿ, ಶರತ್‌ಲೋಹಿತಾಶ್ವ, ಶಂಕರ್‌ಅಶ್ವತ್, ತಿಲಕ್, ಮುನಿ, ಸುಚೀಂದ್ರಪ್ರಸಾದ್, ಆರ್.ಜಿ. ವಿಜಯಸಾರಥಿ, ಯತಿರಾಜ್, ಜಯಲಕ್ಷ್ಮೀ, ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ADVERTISEMENT

ಸ್ವಿಟ್ಜರ್‌ಲೆಂಡ್‌ನಲ್ಲಿ  ವಿರಾಟ್   
ಡಿ.ರತ್ನ ಕುಮಾರ್, ನಿರ್ಮಿಸುತ್ತಿರುವ ವಿರಾಟ್ ಚಿತ್ರದ ಎರಡು ಹಾಡುಗಳಿಗೆ ಸ್ವಿಟ್ಜರ್‌ಲೆಂಡ್‌ನಲ್ಲಿ ಚಿತ್ರೀಕರಣ ನಡೆದಿದೆ. ಕಲೈ ನೃತ್ಯ ನಿರ್ದೇಶನದಲ್ಲಿ ದರ್ಶನ್, ವಿಧಿಶಾ ಶ್ರೀವಾತ್ಸವ್, ಇಶಾ ಚಾವ್ಲಾ ಹೆಜ್ಜೆ ಹಾಕಿದರು.
 
ಚಿತ್ರದ ಕಥೆ ಸಂಭಾಷಣೆ ಎಂ.ಎಸ್. ರಮೇಶ್, ಛಾಯಾಗ್ರಹಣ  ಎ.ವಿ.ಕೃಷ್ಣಕುಮಾರ್, ಸಂಗೀತ ವಿ. ಹರಿಕೃಷ್ಣ ಅವರದ್ದು. ತಾರಾಗಣದಲ್ಲಿ ಚೈತ್ರಾಚಂದ್ರನಾಥ್, ಶಶಿಕುಮಾರ್, ಸುಹಾಸಿನಿ, ರಂಗಾಯಣ ರಘು, ರವಿಶಂಕರ್, ಶರಣ್, ಬುಲೆಟ್ ಪ್ರಕಾಶ್, ಸುಮಲತಾ ಅಂಬರೀಶ್, ಪದ್ಮಾವಾಸಂತಿ, ತುಳಸಿ ಶಿವಮಣಿ, ಚಿತ್ರಾ ಶೆಣೈ, ರಾಮಮೂರ್ತಿ ಮುಂತಾದವರಿದ್ದಾರೆ. 
 
ಶಿವನ ಹಾಡು

ಬಸವರಾಜ್ ಹಿರೇಮಠ್ ನಿರ್ಮಿಸುತ್ತಿರುವ  `ಶ್ರೀ ಅಮರೇಶ್ವರ ಮಹಾತ್ಮೆ~ ಚಿತ್ರಕ್ಕೆ ಕಳೆದ ವಾರ ರಾಯಚೂರು ಜಿಲ್ಲೆಯ ಲಿಂಗಸೂರಿನ ಸುತ್ತಮುತ್ತ ಚಿತ್ರೀಕರಣ ನಡೆಯಿತು. `ಧರೆಗಿಳಿದು ಧರೆಗಿಳಿದು ಬಾರೋ ಶಿವಾ, ಕಣ್ತೆರೆದು ಕಣ್ತೆರೆದು ನೋಡು ಶಿವ~ ಹಾಡಿಗೆ ನಾಯಕ ಅಭಿಜಿತ್, ನಾಯಕಿ ಪ್ರಜ್ವಲ ಹೆಜ್ಜೆ ಹಾಕಿದರು.
 
`ಡೊಳ್ಳು ಢಮರುಗ ನಾದ ಶೃತಿಯ ಸಾರುವ ವೇದ ಎಲ್ಲೆಡೆಯು ಶಿವನ ಶ್ರೀಪಾದ~ ಹಾಡಿಗೆ ಅಭಯ್, ಗೌತಮಿ ನರ್ತಿಸಿದರು. ಒಟ್ಟು 3 ಹಾಡುಗಳನ್ನು ಮದನ್ ಹರಿಣಿ ನೃತ್ಯ ನಿರ್ದೇಶನದಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು. ಅರವಿಂದ್ ಮುಳುಗುಂದ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಮಹಾಬಲೇಶ್ ಛಾಯಾಗ್ರಹಣವಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.