ADVERTISEMENT

‘ಧೂಮ್‌ 3’ ದಾಖಲೆ ಗಳಿಕೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2013, 19:30 IST
Last Updated 23 ಡಿಸೆಂಬರ್ 2013, 19:30 IST

ಆಮೀರ್ ಖಾನ್ ಮುಖ್ಯ ಭೂಮಿಕೆಯಲ್ಲಿ ‘ಧೂಮ್‌ 3’ ಚಿತ್ರದ ಮೊದಲ ಎರಡು ದಿನದ ಗಳಿಕೆ ರೂ69.58 ಕೋಟಿ! ತಮಿಳು ಹಾಗೂ ತೆಲುಗು ಅವತರಣಿಕೆಯ ಗಳಿಕೆಯೂ ಈ ಲೆಕ್ಕದಲ್ಲಿ ಸೇರಿಕೊಂಡಿದೆ.

ವಿಜಯ್‌ಕೃಷ್ಣ ಆಚಾರ್ಯ ನಿರ್ದೇಶನದ ಈ ಚಿತ್ರ ಧೂಮ್‌ ಸರಣಿ ಚಿತ್ರಗಳಲ್ಲೇ ಇದು ವಿಭಿನ್ನವಾದುದು. ಮೊದಲೆರಡು ಚಿತ್ರಗಳಿಗಿಂತ ಗಟ್ಟಿ ಕಥಾನಕವುಳ್ಳ ‘ಧೂಮ್‌ 3’ ಚಿತ್ರ ಈಗ ಗಲ್ಲಾಪೆಟ್ಟಿಗೆ ದೋಚುತ್ತಿದೆ. ಶುಕ್ರವಾರ ತೆರೆಕಂಡ ಈ ಚಿತ್ರದ ಮೊದಲ ದಿನದ ಗಳಿಕೆ ರೂ36.22 ಕೋಟಿಯಾದರೆ, ಶನಿವಾರದ ಗಳಿಕೆ ರೂ33.36 ಕೋಟಿಯಾಗಿತ್ತು.

ಅಂದಹಾಗೆ, ಮೊದಲೆರಡು ಚಿತ್ರಗಳಂತೆ ಈ ಚಿತ್ರದಲ್ಲೂ ಸಹ ಅಭಿಷೇಕ್‌ ಬಚ್ಚನ್‌ ಪೊಲೀಸ್‌ ಅಧಿಕಾರಿ ಪಾತ್ರ ನಿರ್ವಹಿಸಿದ್ದರೆ, ಉದಯ್‌ ಚೋಪ್ರಾ ತಮ್ಮ ಎಂದಿನ ಹಳಸಲು ಕಾಮಿಡಿಯನ್ನು ಇಲ್ಲೂ ಮುಂದುವರಿಸಿದ್ದಾರೆ. ‘ಧೂಮ್‌ 3’ ಚಿತ್ರಕ್ಕೆ ಆಮೀರ್‌ ಜೀವ ತುಂಬಿದ್ದರೆ, ನಟಿ ಕತ್ರೀನಾ ಕೈಫ್‌ ಗ್ಲಾಮರ್‌ ತುಂಬಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.