ADVERTISEMENT

ವಿಷ್ಣುವರ್ಧನ್‌ 12ನೇ ಪುಣ್ಯ ಸ್ಮರಣೆ: ಹೃದಯವಂತನ ಸ್ಮರಿಸಿದ ಅಭಿಮಾನಿಗಳು

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2021, 6:59 IST
Last Updated 30 ಡಿಸೆಂಬರ್ 2021, 6:59 IST
ವಿಷ್ಣುವರ್ಧನ್
ವಿಷ್ಣುವರ್ಧನ್   

ಬೆಂಗಳೂರು: ನಟ ಡಾ.ವಿಷ್ಣುವರ್ಧನ್ ಅವರ 12ನೇ ಪುಣ್ಯ ಸ್ಮರಣೆ ದಿನವಾದ ಇಂದು (ಡಿ.30) ಅಭಿಮಾನಿಗಳು, ಚಿತ್ರರಂಗದ ಕಲಾವಿದರು ಅವರನ್ನು ನೆನೆದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ.

ವಿಷ್ಣುವರ್ಧನ್ ಅವರು ನಮ್ಮನ್ನು ಅಗಲಿ ಇಂದಿಗೆ 12 ವರ್ಷ. ಅವರು 2009ರ ಡಿಸೆಂಬರ್‌ 30ರಂದು ನಿಧನರಾದರು.

ಕೆಂಗೇರಿ -ಉತ್ತರಹಳ್ಳಿ ರಸ್ತೆಯಲ್ಲಿರುವ ವಿಷ್ಣುವರ್ಧನ್ ಅವರ ಸಮಾಧಿ ಸ್ಥಳಕ್ಕೆ ರಾಜ್ಯದ ವಿವಿಧೆಡೆಯಿಂದ ಬಂದ ಅಭಿಮಾನಿಗಳು ಬೆಳಗ್ಗಿನಿಂದಲೇ ಪೂಜೆ ಸಲ್ಲಿಸುತ್ತಿದ್ದಾರೆ.

ADVERTISEMENT

ಸಚಿವೆ ಶಶಿಕಲಾ ಜೋಲ್ಲೆ ಅವರು ’ಕನ್ನಡ ಚಿತ್ರರಂಗದ ದಂತಕಥೆ, ಅಭಿನಯ ಭಾರ್ಗವ, ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಪುಣ್ಯಸ್ಮರಣೆಯಂದು ಶತಕೋಟಿ ಪ್ರಣಾಮಗಳು.
ಕನ್ನಡ ಚಿತ್ರರಂಗಕ್ಕೆ ಅವರು ನೀಡಿದ ಕಲಾಸೇವೆ ಅವಿಸ್ಮರಣೀಯ ಎಂದು ಟ್ವೀಟ್‌ ಮಾಡಿದ್ದಾರೆ.

ಅಭಿಮಾನಿ ಅನಿಲ್‌ ಸುದೀಪ್‌ ಎಂಬುವರು ’ಈ ಕೈ ಕರ್ನಾಟಕದ ಆಸ್ತಿ, ಈ 5 ಬೆರಳಲ್ಲಿ ಇರೋದು, ಐದು ಕೋಟಿ ಕನ್ನಡಿಗರ ಶಕ್ತಿ, ಮುಷ್ಟಿ ಮಾಡಿ ಹೊಡೆದರೆ, ಆ ವ್ಯಕ್ತಿ ಮತ್ತೆ ಎದ್ದು ಬಂದಿದ್ದು ಚರಿತ್ರೆಯಲ್ಲೇ ಇಲ್ಲ,, ಜೈ ವಿಷ್ಣು ದಾದಾ ಎಂದು ಟ್ವೀಟ್‌ ಮಾಡಿದ್ದಾರೆ.

ಕನ್ನಡ ಚಿತ್ರರಂಗದ ಖ್ಯಾತ ಕಲಾವಿದ ಸಾಹಸಸಿಂಹ ಡಾ.ವಿಷ್ಣುವರ್ಧನ್ ರವರ ಪುಣ್ಯತಿಥಿಯಂದು ಗೌರವ ನಮನಗಳು. 200 ಕ್ಕೂ ಅಧಿಕ ಚಿತ್ರಗಳಲ್ಲಿ ಪ್ರತಿಭೆ ತೋರಿ, ಕೋಟ್ಯಂತರ ಅಭಿಮಾನಿಗಳ ಮನ ಗೆದ್ದ ಅವರ ಕಲೆ, ಶ್ರಮ ಯುವ ಕಲಾವಿದರಿಗೆ ಸ್ಪೂರ್ತಿಯಾಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಟ್ವೀಟ್‌ ಮಾಡಿದ್ದಾರೆ.

ರಾಮಾಚಾರಿಯಾಗಿ ಕನ್ನಡಿಗರ ಮನಗೆದ್ದು, ಸಾಹಸಸಿಂಹನಾಗಿ ಅಭಿಮಾನಿಗಳ ಹೃದಯದಲ್ಲಿ ಮುತ್ತಿನಹಾರ ಪೋಣಿಸಿದ ದಿಗ್ಗಜ ಡಾ.ವಿಷ್ಣುವರ್ಧನ್ ಅವರ ಪುಣ್ಯಸ್ಮರಣಾ ದಿನದಂದು ಭಾವಪೂರ್ಣ ನಮನಗಳನ್ನು ಸಲ್ಲಿಸುತ್ತೇನೆ ಎಂದು ಕಾಂಗ್ರೆಸ್‌ ಶಾಸಕ ಹ್ಯಾರಿಸ್‌ ಟ್ವೀಟ್‌ ಮಾಡಿದ್ದಾರೆ.

ಅಭಿಮಾನಿಗಳು, ರಾಜಕೀಯ ನಾಯಕರು, ಸಿನಿಮಾರಂಗದ ಗಣ್ಯರು ಸೇರಿದಂತೆ ಸಾವಿರಾರು ಜನರು ವಿಷ್ಣುದಾದಾ ಅವರನ್ನು ನೆನೆಯುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.