ADVERTISEMENT

ವೈರಲ್ ವಿಡಿಯೊ: ಒಟ್ಟಿಗೆ ನೃತ್ಯ ಮಾಡಿದ ಅಮೀರ್‌ ಖಾನ್‌- ಕಿರಣ್‌ ರಾವ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಜುಲೈ 2021, 6:28 IST
Last Updated 15 ಜುಲೈ 2021, 6:28 IST
ಅಮೀರ್‌ ಖಾನ್‌- ಕಿರಣ್‌ ರಾವ್‌
ಅಮೀರ್‌ ಖಾನ್‌- ಕಿರಣ್‌ ರಾವ್‌   

ಮುಂಬೈ: ಬಾಲಿವುಡ್‌ ನಟ ಅಮೀರ್‌ ಖಾನ್‌ ಮತ್ತು ಅವರ ಮಾಜಿ ಪತ್ನಿ ಕಿರಣ್ ರಾವ್ ಅವರು ಒಟ್ಟಿಗೆ ನೃತ್ಯ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

ಲಡಾಖ್‌ನಲ್ಲಿ ನಡೆದ ಲಾಲ್‌ ಸಿಂಗ್‌ ಚಡ್ಡಾ ಚಿತ್ರದ ಶೂಟಿಂಗ್‌ ವೇಳೆ ಅಮೀರ್‌ ಖಾನ್‌ ಮತ್ತು ಕಿರಣ್‌ ರಾವ್‌ ನೃತ್ಯ ಮಾಡಿದ್ದಾರೆ. ಲಾಲ್‌ ಸಿಂಗ್‌ ಚಡ್ಡಾ ಹಾಲಿವುಡ್‌ನ ‘ಫಾರೆಸ್ಟ್‌ ಗಂಪ್‌‘ ಚಿತ್ರದ ರಿಮೇಕ್‌ ಆಗಿದ್ದು, ಅವರೊಂದಿಗೆ ಕರೀನಾ ಕಪೂರ್‌ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವು ಮುಂದಿನ ವರ್ಷದ ಡಿಸೆಂಬರ್‌ ತಿಂಗಳಲ್ಲಿ ತೆರೆಕಾಣಲಿದ್ದು, ಅದ್ವೈತ್‌ ಚಂದನ್‌ ನಿರ್ದೇಶನ ಮಾಡಲಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿರುವ ಮೊದಲ ವಿಡಿಯೊದಲ್ಲಿ ಅಮೀರ್‌ ಖಾನ್‌ ಮತ್ತು ಕಿರಣ್‌ ರಾವ್‌ ಅವರು ಕೆಂಪು ಬಣ್ಣದ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ನೃತ್ಯ ಮಾಡಿದ್ದಾರೆ.

ADVERTISEMENT

ಮತ್ತೊಂದು ವಿಡಿಯೊದಲ್ಲಿ ಅಮೀರ್ ಖಾನ್‌ ಅವರು ಕೆಲವು ಮಕ್ಕಳೊಂದಿಗೆ ನೃತ್ಯ ಮಾಡುತ್ತಿದ್ದಾರೆ.

ಬಾಲಿವುಡ್‌ ನಟ ಅಮೀರ್‌ ಖಾನ್‌ ಮತ್ತು ನಿರ್ಮಾಪಕಿ ಕಿರಣ್‌ ರಾವ್‌ ಜು.3ರಂದು ತಮ್ಮ 15 ವರ್ಷಗಳ ದಾಂಪತ್ಯ ಜೀವನವನ್ನು ವಿಚ್ಛೇದನದ ಮೂಲಕ ಅಂತ್ಯಗೊಳಿಸಲು ನಿರ್ಧರಿಸಿರುವುದಾಗಿ ಘೋಷಿಸಿದ್ದರು. ಆದರೆ, ಅವರ ಸಂಬಂಧ ಬೇರೆಯಾದರೂ ಕೂಡ ನಾವು ಒಂದೇ ಕುಟುಂಬ ಎಂದು ಹೇಳುವ ಮೂಲಕ ಒಟ್ಟಾಗಿ ಇರುವುದಾಗಿ ತಿಳಿಸಿದ್ದರು.

ಅಮೀರ್‌ ಖಾನ್ ಮತ್ತು ಕಿರಣ್ ರಾವ್ ಅವರು 2001ರ ಅಶುತೋಷ್ ಗೋವಾರಿಕರ್ ನಿರ್ದೇಶನ ಸಿನಿಮಾ 'ಲಗಾನ್' ಸಿನಿಮಾದ ಚಿತ್ರೀಕರಣದ ವೇಳೆ ಭೇಟಿಯಾಗಿದ್ದರು. ಬಳಿಕ 2005ರಲ್ಲಿ ವಿವಾಹವಾಗಿದ್ದರು. ಇವರಿಬ್ಬರು ಅಮೀರ್‌ ಖಾನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ದೆಲ್ಹಿ ಬೆಲ್ಲಿ, ಪೀಪ್ಲಿ ಲೈವ್ ಮತ್ತು ದಂಗಲ್ ಸಿನಿಮಾಗಳನ್ನು ನಿರ್ಮಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.