
ಪ್ರಜಾವಾಣಿ ವಾರ್ತೆ
ಎಸ್. ರಾಮ್ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ, ಮಯೂರ ರಾಘವೇಂದ್ರ ನಿರ್ದೇಶನದ ‘ಅಬಜಬದಬ’ ಚಲನಚಿತ್ರ ಶೇ 80 ಚಿತ್ರೀಕರಣ ಮುಗಿಸಿದೆ. 2 ಹಾಡು ಹಾಗೂ ಒಂದು ಸಾಹಸ ದೃಶ್ಯಗಳ ಚಿತ್ರೀಕರಣ ಬಾಕಿಯಿದೆ. ಇದೀಗ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ. ಶಂಕರ್‌ನಾಗ್ ಈಸ್ ಬ್ಯಾಕ್ ಎಂದು ಪೋಸ್ಟರ್‌ನಲ್ಲಿ ಬರೆಯಲಾಗಿದೆ.
‘ಅಬಜಬದಬ’ ಚಿತ್ರ ಹಲವು ವಿಶೇಷತೆಗಳನ್ನು ಹೊಂದಿದೆ. ಅದರಲ್ಲಿ ಮುಖ್ಯ ವಿಶೇಷತೆ ಎಂದರೆ ನಮ್ಮ ಕರಾಟೆ ಕಿಂಗ್ ‘ಶಂಕರ್ ನಾಗ್’ ಅವರನ್ನು ಮತ್ತೆ ತೆರೆ ಮೇಲೆ ಕರೆತರುತ್ತಿರುವುದು. ಮುಂಬೈನ ಪ್ರಸಿದ್ಧ ತಂಡದೊಂದಿಗೆ ಕೆಲಸ ಪ್ರಾರಂಭವಾಗಿದೆ. ಮುಂದಿನ ವರ್ಷ ನಮ್ಮ ಶಂಕರ್‌ನಾಗ್ ಅವರನ್ನು ತೆರೆ ಮೇಲೆ ನೋಡಿ ಆನಂದಿಸಬಹುದು’ ಎಂದಿದೆ ಚಿತ್ರತಂಡ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.