ADVERTISEMENT

ಬಚ್ಚನ್‌ ಮಗನಾದರೂ ಆರಂಭದಲ್ಲಿ ಪಾತ್ರಕ್ಕಾಗಿ ಪರದಾಟ: ಅಭಿಷೇಕ್‌ ಪೋಸ್ಟ್‌

ಆರಂಭದ ಕಷ್ಟದ ದಿನಗಳ ಬಗ್ಗೆ ಬರೆದುಕೊಂಡ ನಟ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಜೂನ್ 2020, 9:58 IST
Last Updated 23 ಜೂನ್ 2020, 9:58 IST
ಅಭಿಷೇಕ್ ಬಚ್ಚನ್
ಅಭಿಷೇಕ್ ಬಚ್ಚನ್   

‘ರೆಫ್ಯೂಜಿ ಸಿನಿಮಾಕ್ಕಾಗಿ ಅಭಿಷೇಕ್ ಬಚ್ಚನ್ ಕಿವಿ ಚುಚ್ಚಿಸಿಕೊಂಡಿದ್ದರು. ಆ ಸಿನಿಮಾದಲ್ಲಿ ಪಾತ್ರಕ್ಕೆ ಸರಿ ಹೊಂದಬೇಕೆಂದು ದೊಡ್ಡ ಗಾತ್ರದ ಓಲೆಯನ್ನು ಕಿವಿಗೆ ಹಾಕಿಕೊಂಡಿದ್ದರು. ಓಲೆಯ ಭಾರಕ್ಕೆ ಈಗಲೂ ಅವರ ಕಿವಿ ಸ್ವಲ್ಪ ಬಾಗಿದಂತೆ ಇದೆ'

- ಜ್ಯೂನಿಯರ್‌ ಬಚ್ಚನ್‌ಗೆ‌ ಸಿನಿಮಾ ಬಗೆಗಿರುವ ಸಮರ್ಪಣಾ ಭಾವವನ್ನುನಿರ್ದೇಶಕ ಜೆ.ಪಿ. ದತ್ತ ಈ ರೀತಿ ನೆನಪಿಸಿಕೊಂಡಿದ್ದಾರೆ.

ಅಭಿಷೇಕ್‌ ಬಚ್ಚನ್ಸಿನಿ ಬದುಕು ಆರಂಭಿಸಿದ್ದು2000ರಲ್ಲಿ ’ರೆಫ್ಯೂಜಿ‘ ಸಿನಿಮಾದ ಮೂಲಕ.ಚಿತ್ರರಂಗದಲ್ಲಿ 20 ವರ್ಷಗಳನ್ನು ಪೂರೈಸುತ್ತಿರುವ ಈ ಸಮಯದಲ್ಲಿ ಅವರ ಮೊದಲ ಸಿನಿಮಾ ಕುರಿತು ಚರ್ಚೆಯಾಗುತ್ತಿದೆ. ಹಾಗೇ ಇದೇಸಮಯದಲ್ಲಿ ಅಭಿಷೇಕ್,ಅವಕ್ಕಾಶಕ್ಕಾಗಿ ಅಲೆದಾಡಿದ ಆಹಳೆಯ ದಿನಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೆನಪಿಸಿಕೊಂಡಿದ್ದಾರೆ.

ADVERTISEMENT

ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕಬಾಲಿವುಡ್‌ನಲ್ಲಿ ಸ್ವಜನಪಕ್ಷಪಾತ ಕುರಿತು ಸಾಕಷ್ಟು ಚರ್ಚೆಯಾಗುತ್ತಿದೆ.ಕರಣ್ ಜೋಹರ್, ಸಲ್ಮಾನ್ ಖಾನ್, ಆಲಿಯಾ ಭಟ್, ಸೋನಂ ಕಪೂರ್ ಸೇರಿದ್ದಂತೆ ಅನೇಕರು ವಿರುದ್ಧ ಸ್ವಜನಪಕ್ಷಪಾತದ ಆರೋಪ ಮಾಡಲಾಗಿದೆ.

ಆದರೆ ಇದೇ ಹೊತ್ತಿನಲ್ಲಿ ಬಾಲಿವುಡ್‌ನ‌ ‘ಬಿಗ್‌ ಬಿ’ ಅಮಿತಾಭ್‌‌ ಬಚ್ಚನ್ ಅವರ‌ ಮಗನಾಗಿದ್ದರೂ ನನಗೂ ಅವಕಾಶ ಸಿಗುತ್ತಿರಲಿಲ್ಲ ಎಂಬ ಆಶ್ಚರ್ಯಕರ ವಿಷಯವನ್ನು ಅಭಿಷೇಕ್‌ ಬಚ್ಚನ್‌ ಹಂಚಿಕೊಂಡಿದ್ದಾರೆ.

ಒಂದೇ ಒಂದುಅವಕಾಶಕ್ಕಾಗಿ ತುಂಬಾ ಕಷ್ಟಪಟ್ಟಿದ್ದು,ನಿರ್ಮಾಪಕರು ಮತ್ತು ನಿರ್ದೇಶಕರ ಮನೆ ಬಾಗಿಲಿಗೆ ಅಲೆದಾಡುತ್ತಿದ್ದ ದಿನಗಳೂ ಇದ್ದವು ಎಂದು ಅವರು ಬರೆದುಕೊಂಡಿದ್ದಾರೆ.

ಇದೇ ಜೂನ್ 30ಕ್ಕೆ ಅಭಿಷೇಕ್ ಬಣ್ಣದ ಲೋಕಕ್ಕೆ ಕಾಲಿಟ್ಟು ಭರ್ತಿ 20 ವರ್ಷಗಳಾಗುತ್ತೆ. ಸೋಲು-ಗೆಲವುಗಳ ನಡುವೆಯೂ ಜ್ಯೂನಿಯರ್‌ ಬಚ್ಚನ್‌ 20 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಧೂಮ್, ಬಂಟಿ ಔರ್ ಬಬ್ಲಿ, ಸರ್ಕಾರ್, ದೋಸ್ತಾನ್‌, ಆಲ್ ಈಸ್ ವೆಲ್, ಹೌಸ್ ಫುಲ್-3 ಸೇರಿದ್ದಂತೆ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.

’ಈ ತಿಂಗಳು ಕೊನೆಗೆ ನಾನು ನಟನಾಗಿ 20 ವರ್ಷಗಳನ್ನು ಪೂರೈಸುತ್ತಿದ್ದೇನೆ. ಇದನ್ನು ನಂಬುವುದು ಕಷ್ಟ. ಇಲ್ಲಿಯವರೆಗಿನ ಪಯಣ ಅದ್ಭುತವಾಗಿತ್ತು. ಬದುಕಿನಲ್ಲಿ ನಡೆದು ಬಂದ ಯಾವ ಹಾದಿಯನ್ನೂ ನಾನು ಹಿಂದಿರುಗಿ ನೋಡಿದವನಲ್ಲ. ಈ ಹೊತ್ತಿನಲ್ಲಿ ಸಿನಿ ಪಯಣದಕೆಟ್ಟ ಮತ್ತು ಒಳ್ಳೆಯ ಸಮಯವನ್ನು ನೆನಪಿಸಿಕೊಳ್ಳುತ್ತೇನೆ. 20 ವರ್ಷಗಳ ಹಿಂದೆ ವಿದೇಶದಿಂದ ಮರಳಿದಾಗ 22ರ ಪ್ರಾಯದ ಯುವಕ ನಾನು. ಸ್ವಲ್ಪ ಎತ್ತರಕ್ಕೆವಿಚಿತ್ರವಾಗಿದ್ದ ನನ್ನಮೇಲೆ ನಂಬಿಕೆ ಇಟ್ಟವರು ಹಲವರು‘ ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡು ಪೋಸ್ಟ್‌ ಮಾಡಿದ್ದಾರೆ.ಬಾಲಿವುಡ್‌ ದೈತ್ಯ ಪ್ರತಿಭೆ, ಅಪ್ಪ ಅಮಿತಾಭ್‌ ನನಗೆ ಸ್ಫೂರ್ತಿ ಎಂದು ಹೇಳಿಕೊಂಡಿದ್ದಾರೆ.

’ಅಪ್ಪನ ಹಾಗೆ ಸಿನಿಮಾದಲ್ಲಿ ಗುರುತಿಸಿಕೊಳ್ಳಬೇಕು, ಸ್ಟಾರ್ ನಟನಾಗಬೇಕೆಂದು ಆಸೆ ಹೊತ್ತು ಬಂದೆ.1998ರಲ್ಲಿ ಅವಕಾಶಕ್ಕಾಗಿ ಎಷ್ಟು ನಿರ್ಮಾಪಕರ ಮತ್ತು ನಿರ್ದೇಶಕರ ಮನೆಗೆ ಅಲೆದಿದ್ದೇನೋ ನನಗೆ ನೆನಪಿಲ್ಲ. ಒಂದೇ ಒಂದು ಅವಕಾಶ ಕೊಡಿ ಎಂದು ಅನೇಕರ ಬಳಿ ಮನವಿ ಮಾಡಿಕೊಂಡಿದ್ದೆ. ಆದರೆ ಯಾರು ಮುಂದೆ ಬರಲಿಲ್ಲ. ಕೊನೆಗೆ ನಿರ್ದೇಶಕ ಜೆ.ಪಿ. ದತ್ತ ’ರೆಫ್ಯೂಜಿ‘ ಸಿನಿಮಾದಲ್ಲಿಅವಕಾಶ ನೀಡಿದರು’ ಎಂದು ದತ್ತ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

'ಸಂಜೋತಾ ಎಕ್ಸ್‌ಪ್ರೆಸ್‌' ಎಂಬ ಕನಸು

ಅಭಿಷೇಕ್ ಬಚ್ಚನ್ ಬಹುದಿನಗಳ ಕನಸಿನ ಸಿನಿಮಾ ’ಸಂಜೋತಾ ಎಕ್ಸ್‌ಪ್ರೆಸ್‘. ಈ ಸಿನಿಮಾ ಸೆಟ್ಟೇರದ ಬಗ್ಗೆಯೂ ಅವರು ಇದೇ ವೇಳೆ ಬಹಿರಂಗಪಡಿಸಿದ್ದಾರೆ.

ನಿರ್ದೇಶಕ ರಾಕೇಶ್ ಓಂ ಪ್ರಕಾಶ್ ಮೆಹ್ರಾ ಮತ್ತು ಅಭಿಷೇಕ್ ಇಬ್ಬರು ’ಸಂಜೋತಾ ಎಕ್ಸ್‌ಪ್ರೆಸ್‘ ಸಿನಿಮಾ ಮಾಡಲು ಮುಂದಾಗುತ್ತಾರೆ. ಈ ಚಿತ್ರಕ್ಕಾಗಿ ತುಂಬಾ ಕಷ್ಟಪಡುತ್ತಾರೆ. ಆದರೆ ಸಿನಿಮಾ ನಿರ್ಮಾಣ ಮಾಡಲು ಯಾರೂ ಮುಂದೆ ಬರುವುದಿಲ್ಲ. ಕೊನೆಗೂ ಅಭಿಷೇಕ್ ಕನಸಿನ ಸಿನಿಮಾ ಸೆಟ್ಟೇರುವುದೇ ಇಲ್ಲ. ನಂತರ ನಿರ್ದೇಶಕ ರಾಕೇಶ್ ಓಂ ಪ್ರಕಾಶ್ ಮತ್ತು ಅಭಿಷೇಕ್ ಇಬ್ಬರು ’ದಿಲ್ಲಿ 6‘ ಸಿನಿಮಾ ಮಾಡಿದರು.

ಅಭಿಷೇಕ್ ಬಳಿ ಸದ್ಯ ಮೂರ್ನಾಲ್ಕು ಸಿನಿಮಾಗಳಿವೆ. ಪ್ರಾರಂಭದ ದಿನಗಳಲ್ಲಿ ಕಷ್ಟ ಎದುರಿಸಿ ಚಿತ್ರರಂಗದಲ್ಲಿ ನೆಲೆಯೂರಿದ ಬಳಿಕವೂ ದೊಡ್ಡ ಮಟ್ಟದಲ್ಲಿ ಯಶಸ್ಸು ಕೈ ಹಿಡಿದಿಲ್ಲ. ಅಭಿಷೇಕ್ ನಟನೆಯ ಸಿನಿಮಾಗಳ ಸಂಖ್ಯೆ ಕಡಿಮೆಯಾಗುತ್ತಿವೆ.

2016ರಲ್ಲಿ ರಿಲೀಸ್ ಆದ ’ಮನ್ಮಾರ್ಜಿಯಾನ್‘ ಸಿನಿಮಾದಲ್ಲಿ ಅಭಿಷೇಕ್ ಕೊನೆಯದಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ’ಲುಡೊ‘, ’ದಿ ಬಿಗ್ ಬುಲ್‘ ಮತ್ತು ’ಬಾಬ್ ಬಿಸ್ವಾಸ್‘ ಸಿನಿಮಾಗಳಲ್ಲಿ ಅಭಿನಯಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.