ಶ್ಯಾಮ್ ಬೆನಗಲ್
–ಪಿಟಿಐ ಚಿತ್ರ
ಮುಂಬೈ: 1970 ಮತ್ತು 80ರ ದಶಕದಲ್ಲಿ ‘ಅಂಕುರ್’, ‘ನಿಶಾಂತ್’ ಮತ್ತು ‘ಮಂಥನ್’ ಮುಂತಾದ ಚಲನಚಿತ್ರಗಳ ಮೂಲಕ ಹೊಸ ಅಲೆಯ ಸಿನಿಮಾ ಚಳವಳಿಗೆ ನಾಂದಿ ಹಾಡಿದ್ದ ಚಲನಚಿತ್ರ ನಿರ್ದೇಶಕ ಶ್ಯಾಮ್ ಬೆನಗಲ್ (90) ಸೋಮವಾರ ಇಲ್ಲಿ ನಿಧನರಾದರು.
ಅವರಿಗೆ ಪತ್ನಿ ನೀರಾ ಬೆನಗಲ್ ಮತ್ತು ಪುತ್ರಿ ಪಿಯಾ ಬೆನಗಲ್ ಇದ್ದಾರೆ.
‘ತಂದೆಯವರು ದೀರ್ಘಕಾಲದಿಂದ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದರು. ರೋಗ ಉಲ್ಬಣಿಸಿದ ಕಾರಣ ವೊಕಾರ್ಟ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಂಜೆ 6.38ಕ್ಕೆ ಅವರು ನಿಧನರಾದರು’ ಎಂದು ಪುತ್ರಿ ಪಿಯಾ ತಿಳಿಸಿದ್ದಾರೆ.
ಬೆನಗಲ್ ಅವರಿಗೆ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.
ಅವರು 10 ದಿನಗಳ ಹಿಂದೆಯಷ್ಟೇ (ಡಿ.14ರಂದು) ತಮ್ಮ 90ನೇ ಹುಟ್ಟುಹಬ್ಬ ಆಚರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.