ADVERTISEMENT

ಸಿನಿಮಾಗಳಲ್ಲಿ ಅವಕಾಶ ಕಲ್ಪಿಸುವುದಾಗಿ ಹೆಸರು ದುರುಪಯೋಗ ಮಾಡಿಕೊಂಡರೆ ಕ್ರಮ: ಸಲ್ಮಾನ್‌

ಐಎಎನ್ಎಸ್
Published 17 ಜುಲೈ 2023, 13:23 IST
Last Updated 17 ಜುಲೈ 2023, 13:23 IST
ಸಲ್ಮಾನ್‌ ಖಾನ್
ಸಲ್ಮಾನ್‌ ಖಾನ್    

ಮುಂಬೈ: ಬಾಲಿವುಡ್‌ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ ಅವರ ನಿರ್ಮಾಣ ಸಂಸ್ಥೆ ‘ಎಸ್‌ಕೆಎಫ್‘ ಯಾವುದೇ ವ್ಯಕ್ತಿ ಅಥವಾ ಏಜೆನ್ಸಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿಲ್ಲ ಎಂದು ಸಲ್ಮಾನ್‌ ಖಾನ್‌ ತಿಳಿಸಿದ್ದಾರೆ.

ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು,‘ ಸಿನಿಮಾಗಳಲ್ಲಿ ಅವಕಾಶ ಕಲ್ಪಿಸಿಕೊಡುವುದಾಗಿ ನನ್ನ ಮತ್ತು ಎಸ್‌ಕೆಎಫ್ ನಿರ್ಮಾಣ ಸಂಸ್ಥೆ ಹೆಸರನ್ನು ದುರುದ್ದೇಶವಾಗಿ ಬಳಸಿಕೊಂಡರವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು‘ ಎಂದು ಎಚ್ಚರಿಕೆ ನೀಡಿದ್ದಾರೆ.

ಮುಂದುವರಿದು, ನಮ್ಮ ಸಂಸ್ಥೆ ಯಾವುದೇ ಕಾಸ್ಟಿಂಗ್ ಏಜೆನ್ಸಿಗಳನ್ನು ನೇಮಿಸಿಕೊಂಡಿಲ್ಲ. ಈ ರೀತಿಯ ಮೇಸೆಜ್ ಮತ್ತು ಇ–ಮೇಲ್‌ ಬಂದರೆ ನಂಬಬೇಡಿ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ADVERTISEMENT

ಭಾಯಿಜಾನ್‌ ‘ಟೈಗರ್ –3’ ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು ದೀಪಾವಳಿಗೆ ಬಿಡುಗಡೆಯಾಗಲಿದ್ದು, ಚಿತ್ರದಲ್ಲಿ ಕತ್ರಿನಾ ಕೈಫ್‌ ಮತ್ತು ಇಮ್ರಾನ್‌ ಹಶ್ಮಿ ಕೂಡ ನಟಿಸಲಿದ್ದಾರೆ. ‘ಟೈಗರ್ –3’ ನಲ್ಲಿ, ಅಭಿಮಾನಿಗಳು ಶಾರುಖ್ ಖಾನ್ ಅವರನ್ನು ವಿಶೇಷ ಅತಿಥಿ ಪಾತ್ರದಲ್ಲಿ ನೋಡಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.