ಅಂಜನಾ ಎಶಾಯ್
ಬೆಂಗಳೂರು: ದಕ್ಷಿಣ ಭಾರತ ಸಿನಿ ರಂಗದ ಖ್ಯಾತ ನಟ ಅರ್ಜುನ್ ಸರ್ಜಾ ಅವರ ಕಿರಿಯ ಪುತ್ರಿ ಅಂಜನಾ ಇಟಲಿ ಹುಡುಗನನ್ನು ವರಿಸುತ್ತಿದ್ದಾರೆ.
ಅರ್ಜುನ್ ಅವರ ಕಿರಿಯ ಪುತ್ರಿ 25 ವರ್ಷದ ಅಂಜನಾ ಅವರು ಇಟಲಿಯ ಎಶಾಯ್ ಎನ್ನುವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥದ ಫೋಟೊಗಳನ್ನು ಅಂಜನಾ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇಟಲಿಯ ಲೇಕ್ ಕೊಮೊದಲ್ಲಿ ಅಂಜನಾ–ಎಶಾಯ್ ಉಂಗುರ ಬದಲಿಸಿಕೊಂಡಿದ್ದಾರೆ. ಅಂಜನಾ ಅವರು ಕಲಾವಿದೆ ಹಾಗೂ ಫ್ಯಾಷನ್ ಡಿಸೈನರ್ ಕೂಡ ಹೌದು. ಎಶಾಯ್ ಅವರು ಇಟಲಿಯಲ್ಲಿ ಮನರಂಜನಾ ಕ್ಷೇತ್ರದ ಉದ್ಯಮಿ ಎನ್ನಲಾಗಿದೆ.
ಅಂಜನಾ ಹಾಗೂ ಎಶಾಯ್ ಅವರು ಕಳೆದ 13 ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ವಿದ್ಯಾಭ್ಯಾಸಕ್ಕೆ ತೆರಳಿದ್ದ ಅಂಜನಾ ಸದ್ಯ ಇಟಲಿಯಲ್ಲೇ ನೆಲೆಸಿದ್ದಾರೆ. ಇತ್ತೀಚೆಗೆ ಅರ್ಜುನ್ ಅವರ ಹಿರಿಯ ಪುತ್ರಿ ನಟಿ ಐಶ್ವರ್ಯ ಅವರು ತಮಿಳು ನಟ ಉಮಾಪತಿ ರಾಮಯ್ಯ ಅವರನ್ನು ಮದುವೆಯಾಗಿದ್ದರು.
ಶೀಘ್ರದಲ್ಲೇ ಅಂಜನಾ–ಎಶಾಯ್ ಮದುವೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿರುವುದಾಗಿ ತಿಳಿದು ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.