ADVERTISEMENT

‘ವಜ್ರಮುನಿ’ಯಲ್ಲ ಕೋಮಲ್‌!: ‘ಯಲಾಕುನ್ನಿ’ ಟೀಸರ್‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2024, 11:54 IST
Last Updated 17 ಸೆಪ್ಟೆಂಬರ್ 2024, 11:54 IST
ಕೋಮಲ್‌ ಕುಮಾರ್‌ 
ಕೋಮಲ್‌ ಕುಮಾರ್‌    

ಸೆನ್ಸೇಷನಲ್‌ ಸ್ಟಾರ್‌ ಕೋಮಲ್‌ ‘ಯಲಾಕುನ್ನಿ’ ಎನ್ನುತ್ತಾ ತೆರೆಗೆ ಬರಲಿದ್ದಾರೆ. ಎನ್.ಆರ್. ಪ್ರದೀಪ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. 

‘ವಜ್ರಮುನಿ’ಯಾಗಿ ಕೋಮಲ್‌ ಅವತಾರವೆತ್ತಿದ್ದು, ಅವರಂತೆಯೇ ಕಾಣಿಸಿಕೊಂಡು ಸೆಳೆದಿದ್ದಾರೆ. ಶ್ರೀಕೃಷ್ಣನಾಗಿ, ವಜ್ರಮುನಿಯಾಗಿ ಹೀಗೆ ಭಿನ್ನ ಅವತಾರಗಳನ್ನು ಎತ್ತುತ್ತ ಹಲವು ಶೇಡ್‌ಗಳಲ್ಲಿ ಕೋಮಲ್‌ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ‘ಮೇರಾ ನಾಮ್‌ ವಜ್ರಮುನಿ’ ಎನ್ನುವ ಅಡಿಬರಹವಿದ್ದು, ಸೌಂದರ್ಯ ಸಿನಿ ಕಂಬೈನ್ಸ್ ಹಾಗೂ ನರಸಿಂಹ ಸಿನಿಮಾಸ್ ಲಾಂಛನದಲ್ಲಿ ಅನುಸೂಯ ಕೋಮಲ್‌ಕುಮಾರ್, ಸಹನಾಮೂರ್ತಿ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಶೀಘ್ರದಲ್ಲೇ ಸಿನಿಮಾ ತೆರೆಕಾಣಲಿದೆ. ಈ ಚಿತ್ರದಲ್ಲಿ ಕೋಮಲ್ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ‌. ದತ್ತಣ್ಣ, ಸಾಧು ಕೋಕಿಲ, ಮಿತ್ರ, ಸುಚೇಂದ್ರ ಪ್ರಸಾದ್, ಶಿವರಾಜ್ ಕೆ.ಆರ್. ಪೇಟೆ, ತಬಲಾ ನಾಣಿ, ರಾಜು ತಾಳಿಕೋಟೆ, ಸುಮನ್ ನಗರ್‌ಕರ್, ಮಾನಸಿ ಸುಧೀರ್, ಯತಿರಾಜ್ ಜಗ್ಗೇಶ್, ಜಯಸಿಂಹ ಮುಸುರಿ, ರಘು ರಾಮನಕೊಪ್ಪ, ಮಹಾಂತೇಶ್, ಜಯರಾಮ್ ಸೇರಿದಂತೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ. ಚಿತ್ರದ ನಾಯಕಿಯರಾಗಿ ನಿಸರ್ಗ ಅಪ್ಪಣ್ಣ ಮತ್ತು ‘ಗಿಚ್ಚಿಗಿಲಿಗಿಲಿ’ಯ ಅಮೃತಾ ಬಣ್ಣ ಹಚ್ಚಿದ್ದಾರೆ. ವಜ್ರಮುನಿ ಅವರ ಮೊಮ್ಮೊಗ ಆಕರ್ಷ್‌ ಈ ಚಿತ್ರದ ಮೂಲಕ ಚಂದನವನ ಪ್ರವೇಶಿಸುತ್ತಿದ್ದಾರೆ. ಮಯೂರ್ ಪಟೇಲ್ ಖಳನಾಯಕನಾಗಿ ನಟಿಸಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.