
ಹಾಸ್ಯ ನಟ ರಾಜ್‌ಪಾಲ್ ಯಾದವ್
ಎಕ್ಸ್ ಚಿತ್ರ
₹9 ಕೋಟಿ ಚೆಕ್ ಬೌನ್ಸ್ ಪ್ರಕರಣದಲ್ಲಿ ತಿಹಾರ್ ಜೈಲು ಪಾಲಾಗಿ ಇತ್ತೀಚೆಗೆ ಮಧ್ಯಂತರ ಜಾಮೀನು ಪಡೆದು ಹೊರಬಂದಿರುವ ನಟ ರಾಜ್‌ಪಾಲ್ ಯಾದವ್ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಕೆಲವು ದಿನಗಳ ಹಿಂದೆ ಚೆಕ್ ಬೌನ್ಸ್ ಪ್ರಕರಣದಲ್ಲಿ ನ್ಯಾಯಾಲಯವು ರಾಜ್‌ಪಾಲ್ ಯಾದವ್ ಅವರು ಅಪರಾಧಿ ಎಂದು ತೀರ್ಪು ನೀಡಿ ಶಿಕ್ಷೆ ವಿಧಿಸಿತ್ತು. ಜೈಲಿಗೆ ಹೋಗುವ ಮುನ್ನ ರಾಜ್‌ಪಾಲ್ ಅವರು ನನ್ನ ಹತ್ತಿರ ಮರುಪಾವತಿಸಲು ಹಣವಿಲ್ಲ ಮತ್ತು ಬೇರೆ ದಾರಿ ಕಾಣುತ್ತಿಲ್ಲ, ಸಹಾಯ ಕೇಳಲು ಯಾರು ನನಗೆ ಸ್ನೇಹಿತರಿಲ್ಲ ಎಂದು ಬೇಸರ ಹೊರ ಹಾಕಿದ್ದರು.
ಆ ಬೆನ್ನಲ್ಲೆ ಸೋನು ಸೂದ್ ಸೇರಿದಂತೆ ಸಾಕಷ್ಟು ನಟರು ರಾಜ್‌ಪಾಲ್ ಯಾದವ್ ಅವರ ನೆರವಿಗೆ ಧಾವಿಸಿದ್ದರು. ಬಳಿಕ ನಟ ರಾಜ್‌ಪಾಲ್ ಯಾದವ್ ತಮ್ಮ ಸೊಸೆಯ ಮದುವೆಯಲ್ಲಿ ಭಾಗವಹಿಸಲು ಜಾಮೀನು ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯವು ಷರತ್ತುಬದ್ಧ ಅರ್ಜಿಯನ್ನು ಪುರಸ್ಕರಿಸಿತು. ತಿಹಾರ್ ಜೈಲಿನಲ್ಲಿ 12 ದಿನಗಳನ್ನು ಕಳೆದ ಬಳಿಕ ಮಧ್ಯಂತರ ಜಾಮೀನು ಪಡೆದ ಅವರು, ಫೆಬ್ರುವರಿ 17ರಂದು ಹೊರಬಂದು ಸೊಸೆಯ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ.
ಇದೀಗ ರಾಜ್‌ಪಾಲ್ ಅವರ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಸೊಸೆಯ ಮೆಹೆಂದಿ ಕಾರ್ಯಕ್ರಮದಲ್ಲಿ ಅವರು ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.