ADVERTISEMENT

‘ದೈಜಿ’.. ವಿಭಿನ್ನ ಗೆಟಪ್‌ನಲ್ಲಿ ರಮೇಶ್‌ ಅರವಿಂದ್– ಮತ್ತೊಂದು ಹಾರರ್ ಮಿಸ್ಟರಿ

‘ಶಿವಾಜಿ ಸುರತ್ಕಲ್’ ಸಿನಿಮಾ ನಿರ್ದೇಶಿಸಿದ್ದ ಆಕಾಶ್ ಶ್ರೀವತ್ಸ ಜೊತೆ ಈ ಚಿತ್ರಕ್ಕಾಗಿ ಮತ್ತೆ ಕೈಜೋಡಿಸಿದ್ದಾರೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2023, 10:15 IST
Last Updated 10 ಸೆಪ್ಟೆಂಬರ್ 2023, 10:15 IST
<div class="paragraphs"><p>ರಮೇಶ್‌&nbsp;ಅರವಿಂದ್,&nbsp;ದೈಜಿ</p></div>

ರಮೇಶ್‌ ಅರವಿಂದ್, ದೈಜಿ

   

ಬೆಂಗಳೂರು: ನಟ ರಮೇಶ್‌ ಅರವಿಂದ್‌ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ನೂತನ ಚಿತ್ರಕ್ಕೆ ‘ದೈಜಿ’ ಎಂದು ಹೆಸರಿಡಲಾಗಿದೆ. ನಟ ರಮೇಶ್‌ ‘ಶಿವಾಜಿ ಸುರತ್ಕಲ್’ ಸಿನಿಮಾ ನಿರ್ದೇಶಿಸಿದ್ದ ಆಕಾಶ್ ಶ್ರೀವತ್ಸ ಜೊತೆ ಈ ಚಿತ್ರಕ್ಕಾಗಿ ಮತ್ತೆ ಕೈಜೋಡಿಸಿದ್ದಾರೆ. 

‘ಚಿತ್ರದ ಶೀರ್ಷಿಕೆ ‘ದೈಜಿ’ಗೆ ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ಅರ್ಥಗಳಿವೆ. ಕೊಂಕಣಿಯಲಿ ‘ದೈಜಿ’ ಎಂದರೆ ರಕ್ತ ಸಂಬಂಧ. ಜಪಾನೀ ಭಾಷೆಯಲ್ಲಿ ‘ದೈಜಿ’ ಎಂದರೆ ಬಹಳ ಕಾಳಜಿ ವಹಿಸಬೇಕಾದ ವಿಚಾರ. ಹಾರರ್ ಮಿಸ್ಟರಿ ಕಥೆಯುಳ್ಳ ಚಿತ್ರ. ಹಿಂದೆಂದೂ ಕಾಣಿಸಿಕೊಳ್ಳದಂತಹ ಒಂದು ಪಾತ್ರದಲ್ಲಿ ನಟ ರಮೇಶ್‌ ಕಾಣಿಸಿಕೊಳ್ಳುತ್ತಿದ್ದಾರೆ’ ಎನ್ನುತ್ತಾರೆ ನಿರ್ದೇಶಕ ಆಕಾಶ್ ಶ್ರೀವತ್ಸ.

ADVERTISEMENT

ವಿಭಾ ಕಶ್ಯಪ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ರವಿ ಕಶ್ಯಪ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಡಿಸೆಂಬರ್ ಅಥವಾ ಜನವರಿ ತಿಂಗಳಿನಲ್ಲಿ  ಚಿತ್ರೀಕರಣ ಪ್ರಾರಂಭವಾಗಲಿದ್ದು, ಬಹುತೇಕ ಅಮೆರಿಕದಲ್ಲಿಯೇ ನಡೆಯುವ ಕಥೆ ಎಂದಿದೆ ಚಿತ್ರತಂಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.