ADVERTISEMENT

ನಿತಿನ್ ಗಡ್ಕರಿ ಸಹಾಯ‌ ನೆನೆದು ಭಾವನಾತ್ಮಕ ಟ್ವೀಟ್ ಮಾಡಿದ ಸಂಜಯ್ ದತ್

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2021, 7:31 IST
Last Updated 7 ಸೆಪ್ಟೆಂಬರ್ 2021, 7:31 IST
ಗಡ್ಕರಿ, ಸಂಜಯ್‌ ದತ್‌
ಗಡ್ಕರಿ, ಸಂಜಯ್‌ ದತ್‌   

ಬೆಂಗಳೂರು; ನಟ ಸಂಜಯ್ ದತ್ ಅವರು ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ನಿತಿನ್ ಗಡ್ಕರಿ ಅವರ ಸಹಾಯ ಸಹಕಾರ ನೆನೆದು ಅವರ ಕುರಿತು ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ.

ಇತ್ತೀಚೆಗೆ ಗಡ್ಕರಿ ಅವರನ್ನು ನಿರ್ಮಾಪಕ ಜೇ ಪಟೇಲ್ ಅವರೊಂದಿಗೆ ಭೇಟಿಯಾಗಿದ್ದ ಸಂಜಯ್ ದತ್, 'ತಮ್ಮ ಜೀವನದಲ್ಲಿ ಗಡ್ಕರಿ ಅವರ ಸಹಾಯವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ' ಎಂದಿದ್ದಾರೆ.

'ನನ್ನ ಕಷ್ಟದ ದಿನಗಳಲ್ಲಿ ನೀವು ನನ್ನ ಬೆನ್ನಿಗೆ ನಿಂತಿದ್ದರ ಬಗ್ಗೆ ನಾನು ಪದಗಳಲ್ಲಿ ಹೇಳಲು ಆಗುವುದಿಲ್ಲ. ನನ್ನ ಜೀವನದಲ್ಲಿ ನೀವು ಅದ್ಭುತ ಬೆಂಬಲ ನೀಡಿದ್ದಿರಾ. ನನ್ನ ಜೀವನದಲ್ಲಿ ನಿಮ್ಮ ಸಹಾಯ ಸಹಕಾರ ಮರೆಯುವುದಿಲ್ಲ' ಎಂದು ಟ್ವೀಟಿಸಿದ್ದಾರೆ.

ADVERTISEMENT

ಅಲ್ಲದೇ ಜೇ ಪಟೇಲ್ ಅವರಿಗೂ ಕೂಡ ದತ್ ಧನ್ಯವಾದ ತಿಳಿಸಿದ್ದು, ನೀವು ನನ್ನ ಜೀವನದ ಪ್ರತಿಯೊಂದು ಕ್ಷಣದಲ್ಲಿ ಆಸರೆಯಾಗಿ ನಿಂತಿದ್ದಿರಾ.‌ ನಾನು ನಿಮಗೆ ಋಣಿಯಾಗಿದ್ದೇನೆ ಎಂದು ಮತ್ತೊಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಇನ್ನು, ಸಂಜಯ್ ದತ್ ಅವರ ಸಿನಿ ಜರ್ನಿ ವೇಗವಾಗಿ ಸಾಗುತ್ತಿದ್ದು ಅವರ ಬಹುನಿರೀಕ್ಷಿತ 'ಕೆಜಿಎಫ್ ಚಾಪ್ಟರ್ 2' ಬಿಡುಗಡೆಗೆ ಸಿದ್ದವಾಗಿದೆ. ಅದರಲ್ಲಿ ಅವರ ಅಧೀರ ಪಾತ್ರ ತೀವ್ರ ಕುತೂಹಲ ಕೆರಳಿಸಿದೆ. 'ಪೃಥ್ವಿರಾಜ್‌', 'ದಿ ಗುಡ್ ಮಹಾರಾಜ' ಸಿನಿಮಾಗಳು ನಿರ್ಮಾಣ ಹಂತದಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.