ADVERTISEMENT

ಡ್ರಗ್ಸ್ ಬಳಕೆ ಆರೋಪ: ಮಲಯಾಳಂ ನಟ ಶೈನ್ ಟಾಮ್ ಚಾಕೊ ಬಂಧನ

ಮಲಯಾಳಂ ನಟ ಶೈನ್ ಟಾಮ್ ಚಾಕೊ ಅವರನ್ನು ಕೊಚ್ಚಿ ಪೊಲೀಸರು ಬಂಧಿಸಿದ್ದಾರೆ.

ಪಿಟಿಐ
Published 19 ಏಪ್ರಿಲ್ 2025, 10:44 IST
Last Updated 19 ಏಪ್ರಿಲ್ 2025, 10:44 IST
<div class="paragraphs"><p>ಶೈನ್ ಟಾಮ್ ಚಾಕೊ</p></div>

ಶೈನ್ ಟಾಮ್ ಚಾಕೊ

   

ಕೊಚ್ಚಿ: ಹೋಟೆಲ್‌ ಒಂದರಲ್ಲಿ ಮಾದಕವಸ್ತು ತಪಾಸಣೆ ಸಂದರ್ಭದಲ್ಲಿ ಸಿನಿಮೀಯ ಶೈಲಿಯಲ್ಲಿ ಪರಾರಿಯಾಗಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಮಲಯಾಳಂ ನಟ ಶೈನ್ ಟಾಮ್ ಚಾಕೊ ಅವರನ್ನು ಕೊಚ್ಚಿ ಪೊಲೀಸರು ಬಂಧಿಸಿದ್ದಾರೆ.

ಬಂಧನಕ್ಕೂ ಮುನ್ನ ನಟ ಚಾಕೊ ತಮ್ಮ ವಕೀಲರ ಮೂಲಕ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಸುಮಾರು ನಾಲ್ಕು ತಾಸುಗಳ ವಿಚಾರಣೆ ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ADVERTISEMENT

ಕಳೆದ ಬುಧವಾರ ರಾತ್ರಿ ಪೊಲೀಸ್ ದಾಳಿ (DANSAF team) ಸಂದರ್ಭದಲ್ಲಿ ಸಿನಿಮಾ ಶೈಲಿಯಲ್ಲಿ ಮೂರನೇ ಮಹಡಿಯ ಕೋಣೆಯ ಕಿಟಕಿಯಿಂದ ಹಾರಿ ಶೈನ್ ಟಾಮ್ ಚಾಕೊ ಪರಾರಿಯಾಗಿದ್ದರು. ಮೂರನೇ ಮಹಡಿಯಿಂದ ಎರಡನೇ ಮಹಡಿಗೆ ಬಳಿಕ ಈಜುಕೊಳಕ್ಕೆ ಹಾರಿ ಮೆಟ್ಟಿಲುಗಳ ಮೂಲಕ ಪರಾರಿಯಾಗಿದ್ದನು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಮೊದಲು ಮಾದಕ ದ್ರವ್ಯಗಳ ವ್ಯಸನಿಯಾಗಿದ್ದ ಶೈನ್ ಟಾಮ್ ಚಾಕೊ, ಇನ್ನಷ್ಟೇ ಬಿಡುಗಡೆಗೊಳ್ಳಲಿರುವ 'ಸೂತ್ರವಾಕ್ಯಂ' ಚಿತ್ರದ ಸೆಟ್‌ನಲ್ಲಿ ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು ಎಂದು ನಟಿ ವಿನ್ಸಿ ಅಲೋಶಿಯಸ್ ಮಲಯಾಳಂ ಚಲನಚಿತ್ರ ಮಂಡಳಿಗೆ ದೂರು ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.