ADVERTISEMENT

ಬೆಂಗಳೂರು | ರ್‍ಯಾಪರ್‌ ಹನಿ ಸಿಂಗ್ ಶೋನಲ್ಲಿ ಭಾಗಿಯಾದ ನಟ ಯಶ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಮಾರ್ಚ್ 2025, 11:10 IST
Last Updated 23 ಮಾರ್ಚ್ 2025, 11:10 IST
<div class="paragraphs"><p>ಹನಿ ಸಿಂಗ್‌ ಕಾರ್ಯಕ್ರಮದಲ್ಲಿ ಭಾಗಿಯಾದ ಯಶ್‌</p></div>

ಹನಿ ಸಿಂಗ್‌ ಕಾರ್ಯಕ್ರಮದಲ್ಲಿ ಭಾಗಿಯಾದ ಯಶ್‌

   

ಚಿತ್ರ ಕೃಪೆ: yoyohoneysingh ಇನ್ಸ್‌ಟಾಗ್ರಾಂ

ಬೆಂಗಳೂರು: ಬಾಲಿವುಡ್ ರ್‍ಯಾಪರ್‌ ಯೋ ಯೋ ಹನಿ ಸಿಂಗ್‌ ಅವರು ಬೆಂಗಳೂರಿನಲ್ಲಿ ಸಂಗೀತ ಕಾರ್ಯಕ್ರಮ ನಡೆಸಿದ್ದಾರೆ. ಹನಿ ಸಿಂಗ್ ಕಾರ್ಯಕ್ರಮದ ವೇಳೆ ಚಂದನವನದ ನಟ ಯಶ್‌ ವೇದಿಕೆಗೆ ಅಚ್ಚರಿಯ ಭೇಟಿ ನೀಡಿದ್ದಾರೆ. 

ADVERTISEMENT

ಹನಿ ಸಿಂಗ್ ಶನಿವಾರ ಬೆಂಗಳೂರಿನಲ್ಲಿ ‘ಮಿಲಿಯನೇರ್‌ ಇಂಡಿಯಾ ಟೂರ್’ ಎನ್ನುವ ಹೆಸರಿನಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಒಂದೇ ವೇದಿಕೆಯಲ್ಲಿ ಇಬ್ಬರು ಕಲಾವಿದರನ್ನು ಕಂಡ ಜನ ಕೂಗಿ ಸಂಭ್ರಮಿಸಿದರು.

ಈ ಕುರಿತು ಹನಿ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ. 

ಯಶ್ ಅವರನ್ನು ಪರಿಚಯಿಸಿದ ಹನಿ ಸಿಂಗ್, ‘ನಮ್ಮಿಬ್ಬರದ್ದು ಒಂದೇ ಕಥೆ. ನಾವಿಬ್ಬರು ವೇದಿಕೆ ಹಂಚಿಕೊಂಡಾಗ ಸಹೋದರ ಭಾವನೆ ಮೂಡುತ್ತದೆ’ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಯಶ್‌, ‘ಪ್ರೀತಿ ಮತ್ತು ಗೌರವ ಬಹು ಮುಖ್ಯವಾಗುತ್ತದೆ. ಜನ ನಿಮ್ಮನ್ನು ಪ್ರೀತಿಸುತ್ತಾರೆ, ಹೀಗೆ ಸಾಗುತ್ತಿರಿ’ ಎಂದಿದ್ದಾರೆ.

ಇದಕ್ಕೂ ಮೊದಲು ಹನಿ ಸಿಂಗ್ ಅವರನ್ನು ಯಶ್‌ ಕನ್ನಡದಲ್ಲೇ ಕರ್ನಾಟಕಕ್ಕೆ ಸ್ವಾಗತಿಸಿದರು.

ಇದೇ ವೇಳೆ, ಯಶ್‌ ಅವರು ಒಪ್ಪಿದರೆ ಅವರೊಂದಿಗೆ ಕೆಲಸ ಮಾಡಲು ಇಚ್ಚಿಸುತ್ತೇನೆ ಎಂದು ಹನಿ ಸಿಂಗ್‌ ಹೇಳಿದ್ದಾರೆ. ಇದಕ್ಕೆ ಯಶ್‌ ಒಪ್ಪಿದ್ದು, ಕನ್ನಡದಲ್ಲೂ ಹಾಡನ್ನು ಹಾಡಬೇಕು ಎಂದು ಷರತ್ತು ಹಾಕಿದ್ದಾರೆ, ಇದಕ್ಕೆ ಹನಿ ಸಿಂಗ್‌ ಅವರೂ ಒಪ್ಪಿಗೆ ನೀಡಿದ್ದಾರೆ.

ಕಾರ್ಯಕ್ರಮದಲ್ಲೇ ಯಶ್‌ ತಮ್ಮ ಮುಂದಿನ ಸಿನಿಮಾ ಟಾಕ್ಸಿಕ್‌ 2026ರ ಮಾರ್ಚ್‌ 19ರಂದು ಬಿಡುಗಡೆಯಾಗಲಿದೆ ಎಂದು ಘೋಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.