ADVERTISEMENT

ಧರ್ಮಸ್ಥಳದ ಮಂಜುನಾಥನ ದರ್ಶನ ಪಡೆದ ನಟಿ ಶ್ರುತಿ ಮತ್ತು ಪುತ್ರಿ

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 8:49 IST
Last Updated 22 ಜುಲೈ 2021, 8:49 IST
ಪುತ್ರಿಯೊಂದಿಗೆ ನಟಿ ಶ್ರುತಿ
ಪುತ್ರಿಯೊಂದಿಗೆ ನಟಿ ಶ್ರುತಿ   

ನಟಿ ಹಾಗೂ ಬಿಜೆಪಿ ನಾಯಕಿ ಶ್ರುತಿ ಮತ್ತು ಅವರ ಮಗಳು ಗೌರಿ, ಧರ್ಮಸ್ಥಳದ ಮಂಜುನಾಥಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ದರ್ಶನ ಪಡೆದಿದ್ದಾರೆ.

ಮಗಳೊಂದಿಗೆ ಶ್ರೀಕ್ಷೇತ್ರಕ್ಕೆಭೇಟಿ ನೀಡಿರುವ ವಿಡಿಯೊವನ್ನು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಶ್ರುತಿ ಹಂಚಿಕೊಂಡು, ಬಂದಿದ್ದೆಲ್ಲವು ಬರಲಿ ಭಗವಂತನ ದಯೆ, ನಿಮ್ಮೆಲರ ಆಶೀರ್ವಾದ, ಹಾರೈಕೆ ಸದಾ ಇರಲಿ ಎಂದು ಬರೆದಿದ್ದಾರೆ.

ಶ್ರುತಿ ಹಳದಿ ಮತ್ತು ಗುಲಾಬಿ ಮಿಶ್ರಿತ ಸೀರೆಯಲ್ಲಿ,ಗೌರಿ ಪಿಂಕ್ ಬಣ್ಣದ ಜರಿ ಸೀರೆಯಲ್ಲಿ ಕಂಗೊಳಿಸುತ್ತಿದ್ದರು. ದೇವರ ದರ್ಶನ ಪಡೆದು ಹೊರಬರುತ್ತಿರುವ ವಿಡಿಯೊವನ್ನು ಶೇರ್‌ ಮಾಡಿದ್ದಾರೆ. ಇದಕ್ಕೆ ಅಭಿಮಾನಿಗಳು ಶುಭ ಹಾರೈಕೆಯ ಕಮೆಂಟ್‌ಗಳನ್ನು ಮಾಡಿದ್ದಾರೆ.

ADVERTISEMENT

ರಾಜ್ಯ ಸರ್ಕಾರ ಇತ್ತೀಚೆಗೆ ಶ್ರುತಿ ಅವರನ್ನು ಕರ್ನಾಟಕ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷರಾಗಿ ನೇಮಕ ಮಾಡಿದ ಬೆನ್ನಲ್ಲೇ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.