ADVERTISEMENT

‘ಅಧ್ಯಕ್ಷ ಇನ್ ಅಮೆರಿಕ’ ಟ್ರೇಲರ್‌ ಶನಿವಾರ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2019, 11:04 IST
Last Updated 26 ಜುಲೈ 2019, 11:04 IST
ಪೋಸ್ಟರ್‌
ಪೋಸ್ಟರ್‌   

ರಾಗಿಣಿ ದ್ವಿವೇದಿ ಮತ್ತು ಶರಣ್ ಅಭಿನಯದ ‘ಅಧ್ಯಕ್ಷಇನ್ಅಮೆರಿಕ’ ಸಿನಿಮಾದ ಟ್ರೇಲರ್‌ ಇದೇ 27ರಂದು ಮಧ್ಯಾಹ್ನ 2 ಗಂಟೆಗೆ ಬಿಡುಗಡೆಯಾಗಲಿದೆ.

ಈ ಬಗ್ಗೆ ನಟ ಶರಣ್‌ ಅಧಿಕೃತವಾಗಿ ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ. ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನ ಯೋಗಾನಂದ್ ಮುದ್ದಾನ್‌ ಅವರದ್ದು.ಸಂಗೀತ ವಿ.ಹರಿಕೃಷ್ಣ, ಛಾಯಾಗ್ರಹಣ ಸುಧಾಕರ್‌ ಎಸ್‌.ರಾಜ್‌, ಸಿದ್ಧಾರ್ಥ ರಾಮಸ್ವಾಮಿ, ಅನಿಶ್‌ ತರುಣ್‌ ಕುಮಾರ್‌ ಅವರದ್ದು.ಟಿ.ಜಿ.ವಿಶ್ವಪ್ರಸಾದ್‌ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ರಾಗಿಣಿಇದೇ ಮೊದಲ ಬಾರಿಗೆ ಎಂಬಂತೆ ಪಕ್ಕಾ ಹಾಸ್ಯಮಯ ಪಾತ್ರದಲ್ಲಿ ಕಾಣಿಸಿದ್ದಾರೆ. ಜೊತೆಗೆ ಒಂದಿಷ್ಟು ಬೋಲ್ಡ್‌ ಆಗಿಯೂ ಕಾಣಿಸಿಕೊಂಡಿದ್ದಾರಂತೆ. ಹಾಸ್ಯಮಯ ಸಂಭಾಷಣೆಗಳು ಚಿತ್ರದುದ್ದಕ್ಕೂ ಇವೆಯಂತೆ. ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ಆಗಸ್ಟ್‌ನಲ್ಲಿ ತೆರೆ ಕಾಣುವ ನಿರೀಕ್ಷೆ ಇದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.