ADVERTISEMENT

2023ಕ್ಕೆ 'ಆದಿಪುರುಷ್‌': ರಾಮನಾಗಿ ಪ್ರಭಾಸ್‌, ರಾವಣನಾಗಿ ಸೈಫ್‌ ಅಲಿ ಖಾನ್‌

ಪಿಟಿಐ
Published 1 ಮಾರ್ಚ್ 2022, 9:13 IST
Last Updated 1 ಮಾರ್ಚ್ 2022, 9:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಶಿವರಾತ್ರಿ ದಿನದಂದು 'ಆದಿಪುರುಷ್‌' ಸಿನಿಮಾದ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ. 2023, ಜನವರಿ 12ಕ್ಕೆ ವಿಶ್ವದಾದ್ಯಂತ 3ಡಿ ಚಿತ್ರ ಬಿಡುಗಡೆಯಾಗಲಿದೆ.

ಆದಿಪುರುಷ್‌ ಚಿತ್ರದ ಪೋಸ್ಟರ್

ಚಿತ್ರವು ಹಿಂದು ಮಹಾಕಾವ್ಯ ರಾಮಾಯಣದ ಕಥಾಹಂದರವನ್ನು ಒಳಗೊಂಡಿದೆ. ದುಷ್ಟ ಶಕ್ತಿಯ ವಿರುದ್ಧದ ಗೆಲುವನ್ನು ಸಂಭ್ರಮಿಸುವ ಸಿನಿಮಾವನ್ನು ಓಂ ರೌತ್‌ ಅವರು ನಿರ್ದೇಶಿಸಿದ್ದಾರೆ.

ನಟ ಪ್ರಭಾಸ್‌ ಅವರು ರಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ಸೈಫ್‌‌ ಅಲಿ ಖಾನ್‌ ಅವರು ರಾವಣನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಹಿಂದೆ ಆಗಸ್ಟ್‌ 11, 2022ಕ್ಕೆ 'ಆದಿಪುರುಷ್‌' ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿ ಪಡಿಸಲಾಗಿತ್ತು.

ADVERTISEMENT

ಶಿವರಾತ್ರಿಯ ಪ್ರಯುಕ್ತ ಸಾಮಾಜಿಕ ತಾಣಗಳ ಮೂಲಕ ಚಿತ್ರತಂಡವು 'ಆದಿಪುರುಷ್‌' ಬಿಡುಗಡೆಯ ದಿನಾಂಕವನ್ನು ಘೋಷಿಸಿದೆ. ಕೃತಿ ಸನನ್‌ ಮತ್ತು ಸನ್ನಿ ಸಿಂಗ್‌ ಅವರು ಚಿತ್ರದಲ್ಲಿ ಪಾತ್ರ ನಿರ್ವಹಿಸಿದ್ದಾರೆ.

3ಡಿ ಚಿತ್ರ 'ಆದಿಪುರುಷ್‌' ವಿಶ್ವದಾದ್ಯಂತ 2023ರ ಜನವರಿ 12ಕ್ಕೆ ಬಿಡುಗಡೆಯಾಗಲಿದೆ ಎಂದು ಪ್ರಭಾಸ್‌ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಓಂ ರೌತ್‌ ಅವರು 2020ರಲ್ಲಿ 'ತಾನಾಜಿ: ದಿ ಅನ್ಸಂಗ್‌ ವಾರಿಯರ್‌' ಚಿತ್ರ ನಿರ್ದೇಶಿಸಿದ್ದರು. ಅಜಯ್‌ ದೇವಗನ್‌ಅವರು ಮರಾಠಾ ಯೋಧ ತಾನಾಜಿ ಅವರ ಪಾತ್ರವನ್ನು ಪೋಷಿಸಿದ್ದರು.ಸೈಫ್‌ ಅಲಿ ಖಾನ್‌ ಅವರು ಉಧಯಬಾನ್‌ ಸಿಂಗ್‌ ರಾಥೋರ್‌ ಪಾತ್ರ ನಿಭಾಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.