ADVERTISEMENT

‘ಮಹಾಕಾಳಿ’ ಭೂಮಿ ಶೆಟ್ಟಿ ಎದುರು ‘ಅಸುರ’ನಾದ ಅಕ್ಷಯ್ ಖನ್ನಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಜನವರಿ 2026, 14:08 IST
Last Updated 1 ಜನವರಿ 2026, 14:08 IST
   

ಕನ್ನಡತಿ ಭೂಮಿ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಚೊಚ್ಚಲ ಟಾಲಿವುಡ್‌ ಸಿನಿಮಾ ‘ಮಹಾಕಾಳಿ’ಯಲ್ಲಿ ಬಾಲಿವುಡ್‌ ನಟ ಅಕ್ಷಯ್‌ ಖನ್ನಾ ಅವರು ನಟಿಸುತ್ತಿದ್ದಾರೆ. ಅಸುರ ಗುರು ‘ಶುಕ್ರಾಚಾರ್ಯ’ ಪಾತ್ರಕ್ಕೆ ಅವರು ಬಣ್ಣ ಹಚ್ಚಿದ್ದಾರೆ.

ಈಗಾಗಲೇ ಅಕ್ಷಯ್‌ ಖನ್ನಾ ಅವರು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದು, ಈ ಕುರಿತ ಚಿತ್ರಗಳನ್ನು ನಿರ್ದೇಶಕಿ ಪೂಜಾ ಕೊಲ್ಲುರು ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.‌ ಅಕ್ಷಯ್‌ ಖನ್ನಾ ಅವರಿಗೂ ಇದು ಮೊದಲ ಟಾಲಿವುಡ್‌ ಸಿನಿಮಾವಾಗಿದೆ.

‘ಮಹಾಕಾಳಿ’ ಪೂಜಾ ಕೊಲ್ಲುರು ನಿರ್ದೇಶನದ ಎರಡನೇ ಸಿನಿಮಾವಾಗಿದೆ. ಈ ಹಿಂದೆ ಮಾರ್ಟಿನ್‌ ಲೂಥರ್ ಕಿಂಗ್ ಸಿನಿಮಾಕ್ಕೆ ಅವರು ಆ್ಯಕ್ಷನ್ ಕಟ್‌ ಹೇಳಿದ್ದರು.

ADVERTISEMENT

ಈ ಚಿತ್ರವು ಸಂಪೂರ್ಣ ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ‘ಹನುಮಾನ್‌’ ಖ್ಯಾತಿಯ ನಿರ್ದೇಶಕ ಪ್ರಶಾಂತ್ ವರ್ಮಾ ಅವರು ತಮ್ಮದೇ ಬ್ಯಾನರ್ ‘ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್‌ ಯೂನಿವರ್ಸ್‌’ ಮೂಲಕ ಚಿತ್ರ ಹೊರ ತರುತ್ತಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾದ ಬಾಲಿವುಡ್‌ ಸಿನಿಮಾ ‘ಧುರಂದರ್’ ನಲ್ಲಿ ವಿಲನ್‌ ಪಾತ್ರದಲ್ಲಿ ಅಕ್ಷಯ್‌ ಖನ್ನಾ ಕಾಣಿಸಿಕೊಂಡಿದ್ದರು. ಈ ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದ್ದು, ಸಾವಿರ ಕೋಟಿ ಕಲೆಹಾಕಿದೆ. ‘ರೆಹಮಾನ್‌’ ಪಾತ್ರದಲ್ಲಿ ಅಕ್ಷಯ್‌ ಖನ್ನಾ ಅವರ ನಟನೆಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.