ADVERTISEMENT

ಎಲ್ಲೂ ಹೋಗಿಲ್ಲ... ನೀನೆಲ್ಲೂ ಹೋಗಿಲ್ಲ ಅಪ್ಪು ಅಪ್ಪು ಅಪ್ಪು: ಇದು ಅನಿತಾ ಆಲ್ಬಂ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2022, 7:23 IST
Last Updated 19 ಮಾರ್ಚ್ 2022, 7:23 IST
ಅನಿತಾ ರಂಗಸ್ವಾಮಿ
ಅನಿತಾ ರಂಗಸ್ವಾಮಿ   

ನಟ, ದಿವಂಗತ ಪುನೀತ್‌ ರಾಜ್‌ಕುಮಾರ್‌ ಅವರ ಗೌರವಾರ್ಥ ಗೀತ ಸಾಹಿತಿ ಮತ್ತು ಸಂಗೀತ ಸಂಯೋಜಕಿ ಅನಿತಾ ರಂಗಸ್ವಾಮಿ ಅವರು ಆಡಿಯೋವೊಂದನ್ನು ಹೊರತಂದಿದ್ದಾರೆ.

ಎಲ್ಲೂ ಹೋಗಿಲ್ಲ...ನೀನೆಲ್ಲೂ ಹೋಗಿಲ್ಲ ಅಪ್ಪು ಅಪ್ಪು ಅಪ್ಪು... ಹಾಡನ್ನು ಆನಂದ್‌ ಆಡಿಯೋದ ಯುಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆ ಮಾಡಿದ್ದಾರೆ. ಶಂಕರ್‌ಮಹದೇವನ್‌, ರಾಜೇಶ್‌ ಕೃಷ್ಣನ್‌, ವಿಜಯ್‌ ರಾಘವೇಂದ್ರ, ಹೇಮಂತ್‌ ಕುಮಾರ್‌ ಅನುರಾಧ ಭಟ್‌ ಈ ಹಾಡಿಗೆ ದನಿಯಾಗಿದ್ದಾರೆ. ಜೊತೆಗೆ ಸರೆಗಮಪ ಕಾರ್ಯಕ್ರಮದ ಸಹಗಾಯಕರೂ ದನಿಗೂಡಿಸಿದ್ದಾರೆ. ಮಾರ್ಚ್‌ 16ರಂದು ಈ ಗೀತೆ ಬಿಡುಗಡೆಯಾಗಿದೆ. ಇದನ್ನು ಸುಮಾರು ಒಂದೂವರೆ ಲಕ್ಷದಷ್ಟು ಮಂದಿ ವೀಕ್ಷಿಸಿದ್ದಾರೆ.

ಅಲ್ವಿನ್‌ ಫೆರ್ನಾಂಡಿಸ್‌ (ಗಿಟಾರ್‌), ಆಕಾಶ್‌ ಪರ್ವ (ಕೀಬೋರ್ಡ್‌), ಸಂದೀಪ್‌ (ಕೊಳಲು), ಸರ್ಫರಾಜ್‌ ಖಾನ್‌ (ಸಾರಂಗಿ) ಸಂಗೀತ ಸಂಯೋಜನೆಯಲ್ಲಿ ಪಾಲ್ಗೊಂಡಿದ್ದಾರೆ. ಜೀವನ್‌ ಕ್ಲಾಡ್‌ ಡಿ'ಸೋಜಾ ಅವರು ವಿಡಿಯೋ ನಿರ್ದೇಶನ, ಸಜಯ್‌ಕುಮಾರ್‌ ಎಂ.ಪಿ. ಧ್ವನಿಮುದ್ರಣ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.