ADVERTISEMENT

ಟ್ವಿಟ್ಟರ್‌ ಮೂಲಕ ಎಸ್‌ಪಿಬಿಗೆ ನುಡಿನಮನ ಸಲ್ಲಿಸಿದ ಚಿತ್ರರಂಗದ ಗಣ್ಯರು

ಗಣ್ಯರಿಂದ ನಮನ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2020, 9:19 IST
Last Updated 25 ಸೆಪ್ಟೆಂಬರ್ 2020, 9:19 IST
ಬಾಲಸುಬ್ರಹ್ಮಣ್ಯಂ
ಬಾಲಸುಬ್ರಹ್ಮಣ್ಯಂ   

ಗಾಯನ ಲೋಕದ ದಿಗ್ಗಜ ಎಸ್‌.ಪಿ. ಬಾಲಸುಬ್ರಹ್ಮಣಂ ಅವರ ಸಾವಿಗೆ ಸಂತಾಪ ಸೂಚಿಸಿ ಭಾರತ ಚಿತ್ರರಂಗ ಹಾಗೂ ಸಂಗೀತ ಲೋಕದ ಅನೇಕರು ಟ್ವೀಟ್ ಮಾಡಿದ್ದಾರೆ.

ಕನ್ನಡ ಚಿತ್ರನಟ ಗಣೇಶ್ ‘ಓಂ ಶಾಂತಿ’ ಎಂದು ಟ್ವೀಟ್ ಮಾಡುವ ಮೂಲಕ ವಿದಾಯ ಹೇಳಿದ್ದಾರೆ.

‘ತಮ್ಮ ಸುಮಧುರ ಕಂಠದಿಂದ 50ಕ್ಕೂ ಹೆಚ್ಚು ವರ್ಷಗಳಿಂದಲೂ ಎಲ್ಲರ ಮನ ತಣಿಸಿದ ಅದ್ಭುತ ಸಹೃದಯಿ ಗಾಯಕ, ಲೆಜೆಂಡ್ ಎಸ್.ಪಿ. ಬಾಲಸುಬ್ರಮಣ್ಯಂರವರು ಇಂದು ವಿಧಿವಶರಾಗಿರುವುದು ನಮ್ಮ ದೇಶಕ್ಕೆ ದುಃಖಕರ ಸಂಗತಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಎಂದು ದೇವರಲ್ಲಿ ಮನವಿ ಮಾಡುತ್ತೇನೆ ನಿಮ್ಮ ದಾಸ ದರ್ಶನ್’ ಎಂದು ಬರೆದಿದ್ದಾರೆ ನಟ ದರ್ಶನ್‌ ತೂಗುದೀಪ್‌.

ADVERTISEMENT

ತೆಲುಗು ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ತಮನ್ ಎಸ್‌. ‘ಮಾಮ ನನಗೆ ಕಣ್ಣೀರನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ನಾನು ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಹೃದಯ ತುಂಬಾ ಭಾರವಾಗಿದೆ’ ಎಂದು ಬರೆದುಕೊಂಡಿದ್ದಾರೆ.

‘ಎಸ್‌ಪಿಬಿ ಅವರು ಇನ್ನಿಲ್ಲ ಎಂಬ ಸುದ್ದಿ ಕೇಳಿ ತುಂಬಾನೇ ಬೇಸರವಾಗಿದೆ. ಅವರ ಮಧುರ ಧ್ವನಿ ಸದಾ ನೆನಪಿನಲ್ಲಿರುತ್ತದೆ’ ಎಂದು ಬರೆದುಕೊಂಡಿದ್ದಾರೆ ನಟ ಪುನೀತ್ ರಾಜ್‌ಕುಮಾರ್.

‘ಅಘಾತವಾಗಿದೆ’ ಎಂದು ಬರೆದುಕೊಳ್ಳುವ ಮೂಲಕ ಸಂತಾಪ ಸೂಚಿಸಿದ್ದಾರೆ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್.

ಈ ಬಗ್ಗೆ ಟ್ವೀಟ್ ಮೂಲಕ ಸಂತಾಪ ಸೂಚಿಸಿರುವ ನಟ ಮಹೇಶ್ ಬಾಬು ‘ಎಸ್‌ಪಿಬಿ ಅವರು ಇನ್ನಿಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರ ಮಧುರ ದನಿಗೆ ಸಾರಿಸಾಟಿ ಬೇರಿಲ್ಲ. ನಿಮ್ಮ ಹಾಡುಗಳು ನಮ್ಮೊಂದಿಗೆ ಸದಾ ಜೀವಂತವಾಗಿರುತ್ತದೆ. ನಿಮ್ಮ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ಬರೆದುಕೊಂಡಿದ್ದಾರೆ.

‘ಸದಾ ನಗುಮೊಗದ ಎಸ್‌ಪಿಬಿ ಇನ್ನಿಲ್ಲ ಎಂಬ ವಿಷಯ ಕೇಳಿ ಅಘಾತವಾಗಿದೆ. ನಿಮ್ಮ ಅಗಲಿಕೆ ತುಂಬಲಾರದ ನಷ್ಟ’ ಎಂದು ಬರೆದುಕೊಂಡಿದ್ದಾರೆ ನಟ ರಾಮ್ ಚರಣ್. ಎಸ್‌ಪಿಬಿ ಸಾವಿಗೆ ಟ್ವಿಟ್ಟರ್ ಮೂಲಕ ಸಂತಾಪ ಸೂಚಿಸಿರುವ ನಟ ಜಗ್ಗೇಶ್
‘ಯಾರ ಕಣ್ಣು ತಾಕಿತು!
ಯಾವತಪ್ಪಿಗೆ ನಿಮಗೆ ಈಶಿಕ್ಷೆ!
ಇನ್ನು ಎಷ್ಟು ಸಾಧಕರು
ಈ ಸಾವಿನ ಶಿಕ್ಷೆಗೆ ಸಾಲು ನಿಂತಿಹರು!
ವಿಶ್ವಶಾಂತಿ ಭಂಗಕ್ಕೆ ಕೊರೋನ
ಹರಡಿ ಮಳ್ಳಿಯಂತ ದರಿದ್ರದೇಶ
ಚೀನವನ್ನ ವಿಶ್ವದ ಕಾಳಜಿ ಇರುವ ಇತರ ರಾಷ್ಟ್ರಗಳು ಮಟ್ಟಹಾಕಿ ಮೂಲೆಗುಂಪು ಮಾಡಬೇಕು!
ನನ್ನನೆಚ್ಚಿನ ಹೃದಯವನ್ನ ಈ ರೀತಿ ಕಳೆದುಕೊಳ್ಳುವೆ ಎನಿಸಲಿಲ್ಲಾ!
ಓಂಶಾಂತಿ.!’ ಎಂದು ಬರೆದುಕೊಂಡಿದ್ದಾರೆ.

‘ಎಸ್‌ಪಿಬಿ ಅವರ ಸಾವಿನ ಸುದ್ದಿ ಕೇಳಿ ತುಂಬಾ ಬೇಸರವಾಗಿದೆ.ಕೆಲ ತಿಂಗಳ ಹಿಂದೆ ನಾನು ಅವರೊಂದಿಗೆ ಮಾತನಾಡಿದ್ದೆ. ಆಗ ಅವರು ಆರೋಗ್ಯದಿಂದಿದ್ದರು. ಜೀವನ ನಿಜಕ್ಕೂ ಅನಿರೀಕ್ಷಿತ. ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ನಟ ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.

‘ಗಾಯನ ನಿಂತಿದೆ ಹಾಡುಗಳಲ್ಲ... ಉಸಿರು ನಿಂತಿದೆ ಹೆಸರಲ್ಲ.... ಪ್ರತಿ ಸಾರಿ ನಿಮ್ಮ ಧ್ವನಿ ಕೇಳಿದಾಗಲೂ ನೀವು ಜೀವಿಸುತ್ತೀರಿ ನಮ್ಮಲ್ಲಿ #RIPSPB sir OM Shanthi’ ಎಂದು ಬರೆದುಕೊಂಡಿದ್ದಾರೆ ನಿರ್ದೇಶಕ ಸಂತೋಷ್ ಆನಂದ್‌ರಾಮ್‌.

‘ಭಾರತೀಯ ಸಂಗೀತ ಜಗತ್ತು ಪ್ರೀತಿಯ ಮಗನನ್ನು ಅಗಲಿದೆ. ಐದು ದಶಕಗಳ ಸಂಗೀತ ಪಯಣದಲ್ಲಿ 40,000ಕ್ಕೂ ಹೆಚ್ಚು ಹಾಡುಗಳಿಗೆ ದನಿಯಾಗಿದ್ದಾರೆ ಎಸ್‌ಪಿಬಿ. ವಿಶ್ವದಲ್ಲಿ ಸಂಗೀತ ಜೀವಿಸುವವರೆಗೂ ನೀವು ಜೀವಂತವಾಗಿರುತ್ತೀರಿ ಸರ್‌’ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ ನಟ ಜ್ಯೂನಿಯರ್ ಎನ್‌ಟಿಆರ್.

ನಿರ್ದೇಶಕ ಪವನ್ ಒಡೆಯರ್ ಟ್ವೀಟ್‌ ಮಾಡಿ ‘ಸಾವು ನಿಮ್ಮ ಜೀವನವನ್ನು ಅಂತ್ಯಗೊಳಿಸಿರಬಹುದು. ಆದರೆ ಜನರೊಂದಿಗಿನ ನಿಮ್ಮ ಭಾಂಧವ್ಯ ಶಾಶ್ವತ’ ಎಂದು ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.