ADVERTISEMENT

Kannada Movies: ಫೆ.20ಕ್ಕೆ ‘ಆಲ್ಫಾ’ ಸಿನಿಮಾ ತೆರೆಗೆ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 0:30 IST
Last Updated 30 ಡಿಸೆಂಬರ್ 2025, 0:30 IST
ಅಯಾನ 
ಅಯಾನ    

‘ಗೀತಾ’, ‘ಗುರುದೇವ ಹೊಯ್ಸಳ’ ಚಿತ್ರಗಳನ್ನು ನಿರ್ದೇಶಿಸಿರುವ ವಿಜಯ್‌ ನಿರ್ದೇಶನದ ಹೊಸ ಸಿನಿಮಾ ‘ಆಲ್ಫಾ’ ಫೆ.20ರಂದು ಬಿಡುಗಡೆಯಾಗಲಿದೆ. 

‘ಮೆನ್‌ ಲವ್‌ ವೆಂಜೆಂನ್ಸ್‌’ ಎಂಬ ಅಡಿಬರಹವಿರುವ ಈ ಸಿನಿಮಾವನ್ನು ಎಲ್‌.ಎ.ಪ್ರೊಡಕ್ಷನ್ಸ್‌ನಡಿ ಆನಂದ್‌ ಕುಮಾರ್‌ ನಿರ್ಮಿಸಿದ್ದಾರೆ. ನಾಯಕನಾಗಿ ಹೇಮಂತ್‌ ಕುಮಾರ್‌ ನಟಿಸಿದ್ದು, ಇವರಿಗೆ ಜೋಡಿಯಾಗಿ ಅಯಾನಾ ಹಾಗೂ ಗೋಪಿಕಾ ಸುರೇಶ್ ನಟಿಸಿದ್ದಾರೆ. ಈ ಚಿತ್ರದ ಮೊದಲ ಹಾಡು ಇತ್ತೀಚೆಗೆ ಮಾಸ್ತಿಯಲ್ಲಿ ಬಿಡುಗಡೆಯಾಯಿತು. ನಾಗಾರ್ಜುನ ಶರ್ಮ ಅವರು ಬರೆದಿರುವ, ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿರುವ ಹಾಗೂ ಅನುರಾಗ್ ಕುಲಕರ್ಣಿ ಹಾಡಿರುವ ‘ರಾವಾ ರಾವಾ’ ಹಾಡು ಇದಾಗಿದೆ. 

ಸಿನಿಮಾದಲ್ಲಿ ‘ಬಿಗ್‌ಬಾಸ್’ ಖ್ಯಾತಿಯ ಕಾರ್ತಿಕ್ ಮಹೇಶ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವಿನಾಶ್, ಅಚ್ಯುತ್ ಕುಮಾರ್, ರಮೇಶ್ ಇಂದಿರಾ, ಬಾಲು ನಾಗೇಂದ್ರ, ಮಾನಸಿ ಸುಧೀರ್, ಗಿರಿರಾಜ್, ರಾಘು ಶಿವಮೊಗ್ಗ ಮುಂತಾದವರು ತಾರಾಬಳಗದಲ್ಲಿದ್ದಾರೆ. ಕಾರ್ತಿಕ್ ಎಸ್. ಛಾಯಾಚಿತ್ರಗ್ರಹಣ, ದೀಪು ಎಸ್.ಕುಮಾರ್ ಸಂಕಲನ ಚಿತ್ರಕ್ಕಿದೆ. ಮಾಸ್ತಿ ಸಂಭಾಷಣೆ, ವಿಜಯ್, ವಿನೋದ್‌, ಅರ್ಜುನ್ ರಾಜ್ ಹಾಗೂ ಯೋಗಾನಂದ ಸಾಹಸ ನಿರ್ದೇಶನ ಮಾಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.