ಜಿ.ಮನೋಹರನ್ ಮತ್ತು ಕೆ.ಪಿ.ಶ್ರೀಕಾಂತ್ ನಿರ್ಮಾಣದ, ಉಪೇಂದ್ರ ನಿರ್ದೇಶಿಸಿ, ನಟಿಸಿರುವ ‘ಯುಐ’ ಸಿನಿಮಾ ಡಿ.20ರಂದು ಬಿಡುಗಡೆಯಾಗುತ್ತಿದೆ. ಇತ್ತೀಚೆಗೆ ಚಿತ್ರತಂಡ ‘ವಾರ್ನರ್’ ಎಂಬ ವಿಡಿಯೊ ರಿಲೀಸ್ ಮಾಡಿತ್ತು. ಇದನ್ನು ವೀಕ್ಷಿಸಿ ಬಾಲಿವುಡ್ ನಟ ಅಮೀರ್ ಖಾನ್ ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
‘ನಾನು ಉಪೇಂದ್ರ ಅವರ ದೊಡ್ಡ ಫ್ಯಾನ್. ಅವರ ಸಿನಿಮಾ ಡಿ.20ಕ್ಕೆ ರಿಲೀಸ್ ಆಗುತ್ತಿದೆ. ‘ಯುಐ’ ಚಿತ್ರದ ಟ್ರೇಲರ್ ಅದ್ಭುತವಾಗಿದ್ದು ನಾನು ಮೂಕವಿಸ್ಮಿತನಾದೆ. ಈ ಸಿನಿಮಾ ದೊಡ್ಡಮಟ್ಟದಲ್ಲಿ ಹಿಟ್ ಆಗಲಿದೆ, ಹಿಂದಿ ಪ್ರೇಕ್ಷಕರೂ ಸಿನಿಮಾವನ್ನು ನೋಡಿ ಮೆಚ್ಚಿಕೊಳ್ಳಲಿದ್ದಾರೆ. ಟ್ರೇಲರ್ ನೋಡಿ ನನಗೂ ಶಾಕ್ ಆಯಿತು. ಉಪೇಂದ್ರ ಅವರಿಗೆ ಶುಭವಾಗಲಿ’ ಎಂದು ಅಮೀರ್ ಖಾನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.