ADVERTISEMENT

48ನೇ ವಿವಾಹ ವಾರ್ಷಿಕೋತ್ಸವ: ಮದುವೆಯ ಚಿತ್ರಗಳನ್ನು ಹಂಚಿಕೊಂಡ ಅಮಿತಾಬ್

ಪಿಟಿಐ
Published 3 ಜೂನ್ 2021, 9:38 IST
Last Updated 3 ಜೂನ್ 2021, 9:38 IST
ಅಮಿತಾಬ್ ಇನ್‌ಸ್ಟಾಗ್ರಾಮ್ ಖಾತೆಯ ಸ್ಕ್ರೀನ್ ಗ್ರ್ಯಾಬ್
ಅಮಿತಾಬ್ ಇನ್‌ಸ್ಟಾಗ್ರಾಮ್ ಖಾತೆಯ ಸ್ಕ್ರೀನ್ ಗ್ರ್ಯಾಬ್   

ಮುಂಬೈ: ಹಿಂದಿ ಚಿತ್ರರಂಗದ ಮೇರು ನಟ ಅಮಿತಾಬ್ ಬಚ್ಚನ್ ತಮ್ಮ 48ನೇ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಈ ಸಂದರ್ಭ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಮದುವೆಯ ಚಿತ್ರಗಳನ್ನು ಹಂಚಿಕೊಂಡಿರುವ ಬಿಗ್ ಬಿ, ಶುಭಾಶಯ ಹೇಳಿದ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.

1973 ರ ಜೂನ್ 3 ರಂದು ಅಮಿತಾಬ್ ಬಚ್ಚನ್ ಅವರು ಜಯಾ ಬಾದುರಿ ಅವರ ಕೈಹಿಡಿದಿದ್ದರು. ಅವರಿಗೆ ಲೇಖಕಿ ಶ್ವೇತಾ ಬಚ್ಚನ್ ನಂದಾ ಮತ್ತು ನಟ ಅಭಿಷೇಕ್ ಬಚ್ಚನ್ ಇಬ್ಬರು ಮಕ್ಕಳಿದ್ದಾರೆ.

78 ವರ್ಷದ ಅಮಿತಾಬ್ ಬಚ್ಚನ್ ಅವರು, ತಮ್ಮ ಹಿತೈಷಿಗಳ ಆರೈಕೆ, ಪ್ರೀತಿ ತುಂಬಿದ ಮಾತುಗಳಿಂದ ನಮ್ಮ ಪಯಣ ಮುಂದುವರೆಯುತ್ತಿದೆ ಎಂದು ಹೇಳಿದ್ದಾರೆ.

ADVERTISEMENT

‘ನಮ್ಮ ವಿವಾಹ ವಾರ್ಷಿಕೋತ್ಸವದಂದು ಜಯಾ ಮತ್ತು ನನಗೆ ಶುಭ ಹಾರೈಸಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು .. ಜೂನ್ 3, 1973 ನಮ್ಮ ಮದುವೆಯಾಗಿ ಈಗ 48 ವರ್ಷಗಳು !!’ ಎಂದು ಬರೆದುಕೊಂಡಿದ್ದಾರೆ. ನಿಮ್ಮ ಪ್ರೀತಿ ತುಂಬಿದ ಶುಭಾಶಯಗಳಿಗೆ ಧನ್ಯವಾದ ಅರ್ಪಿಸುತ್ತೇವೆ’ ಎಂದು ಹೇಳಿದ್ದಾರೆ.

ತಾರಾ ದಂಪತಿ ಅಮಿತಾಬ್ ಬಚ್ಚನ್ ಮತ್ತು ಜಯಾ ಬಾದುರಿ ಅವರು, ‘ಜಾಂಜೀರ್’, ‘ಶೋಲೆ’, ‘ಅಭಿಮಾನ್’, ‘ಚುಪ್ಕೆ ಚುಪ್ಕೆ’, ‘ಸಿಲ್ಸಿಲಾ’, ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.