ADVERTISEMENT

ಕಾರ್ತಿಕ್ ಒಳ್ಳೆಯ ಸ್ನೇಹಿತನಷ್ಟೇ!

​ಪ್ರಜಾವಾಣಿ ವಾರ್ತೆ
Published 21 ಮೇ 2019, 15:48 IST
Last Updated 21 ಮೇ 2019, 15:48 IST
ಅನನ್ಯಾ ಪಾಂಡೆ ಮತ್ತು ಕಾರ್ತಿಕ್ ಆರ್ಯನ್
ಅನನ್ಯಾ ಪಾಂಡೆ ಮತ್ತು ಕಾರ್ತಿಕ್ ಆರ್ಯನ್   

ಬಾಲಿವುಡ್‌ನ ಪುಟ್ಟ ಸ್ಟಾರ್‌ಗಳಾದ ಕಾರ್ತಿಕ್ ಆರ್ಯನ್ ಮತ್ತು ಅನನ್ಯಾ ಪಾಂಡೆ ಇತ್ತೀಚೆಗೆ ಮಾಧ್ಯಮಗಳ ಗಮನ ಸೆಳೆಯುತ್ತಿದ್ದಾರೆ. ಇಬ್ಬರೂ ಜತೆಯಾಗಿ ತಿರುಗಾಡುತ್ತಿದ್ದು, ಪರಸ್ಪರ ಪ್ರೀತಿಯಲ್ಲಿ ಬಿದ್ದಿರಬಹುದು ಎಂಬ ಗಾಸಿಪ್ ಮಾತುಗಳೂ ಬರುತ್ತಿವೆ.

‘ಸ್ಟೂಡೆಂಟ್ ಆಫ್ ಇಯರ್ 2’ನ ಯಶಸ್ಸಿನಿಂದ ಬೀಗುತ್ತಿರುವ ಅನನ್ಯಾ ಸದ್ಯಕ್ಕೆ ಬಟ್ಟೆಯ ಬ್ರ್ಯಾಂಡ್‌ವೊಂದಕ್ಕೆ ರೂಪದರ್ಶಿಯೂ ಆಗಿದ್ದಾಳೆ. ಚಂಕಿ ಪಾಂಡೆಯ ಮಗಳು ಎಂಬ ಸುರಕ್ಷಾ ಕವಚ ತೊರೆದು ಬಾಲಿವುಡ್‌ನಲ್ಲಿ ಸ್ವಂತ ಅಸ್ತಿತ್ವ ಕಂಡುಕೊಳ್ಳುವಲ್ಲಿ ಶ್ರಮ ಪಡುತ್ತಿರುವ ಅನನ್ಯಾಳಿಗೆ ಕಾರ್ತಿಕ್ ಮೇಲೆ ಮನಸಿದೆಯೇ ಎಂದು ಪ್ರಶ್ನಿಸಿದರೆ, ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಉತ್ತರಿಸುತ್ತಾಳೆ.

‘ಕಾರ್ತಿಕ್ ನನ್ನ ಒಳ್ಳೆಯ ಸ್ನೇಹಿತ. ಇಬ್ಬರೂ ಜತೆಯಾಗಿ ಸಿನಿಮಾ ಮಾಡುತ್ತಿದ್ದೇವೆ (ಪತಿ, ಪತ್ನಿ ಔರ್ ವೋ) ನಾವಿಬ್ಬರೂ ಆರಾಮದಾಯಕವಾಗಿದ್ದೇವೆ. ಕಾರ್ತಿಕ್ ಜತೆ ಸಮಯ ಕಳೆಯುವುದು ನನಗೆ ಬಲುಪ್ರಿಯವಾದ ಸಂಗತಿ’ ಎಂದಿರುವ ಅನನ್ಯಾ, ಸಿನಿಮಾಗಳಲ್ಲಿ ಜತೆಯಾಗಿ ಅಭಿನಯಿಸುವಾಗ ಕಾರ್ತಿಕ್ ಬರೀ ತನ್ನ ಸಂಭಾಷಣೆಯ ಬಗ್ಗೆಯಷ್ಟೇ ಅಲ್ಲ, ಆ ದೃಶ್ಯವನ್ನು ಮತ್ತಷ್ಟು ಚೆನ್ನಾಗಿ ಹೇಗೆ ಅಭಿನಯಿಸಬಹುದು ಎಂಬ ಬಗ್ಗೆಯೂ ಗಮನಿಸುತ್ತಾನೆ. ಒಟ್ಟಾರೆ ಕಾರ್ತಿಕ್ ನನ್ನೆಲ್ಲಾ ವಿಷಯಗಳಿಗೂ ಸಹಾಯ ಮಾಡುತ್ತಾನೆ’ ಎಂಬ ವಿವರಣೆ ನೀಡುತ್ತಾಳೆ.

ADVERTISEMENT

ಸದ್ಯಕ್ಕೆ ಪ್ರಥಮ ಸಿನಿಮಾದ ಯಶಸ್ಸಿನಿಂದ ಆತ್ಮವಿಶ್ವಾಸ ಪಡೆದುಕೊಂಡಿರುವ ಅನನ್ಯಾ ಕೈಯಲ್ಲಿ ‘ಪತಿ, ಪತ್ನಿ ಔರ್ ವೋ’ ಸಿನಿಮಾವಿದೆ. ಇದು ಈ ವರ್ಷದ ಅಂತ್ಯದ ವೇಳೆಗೆ ತೆರೆ ಕಾಣುವ ಸೂಚನೆಯಿದೆ.

ತನ್ನ ಮತ್ತು ಅನನ್ಯಾ ನಡುವಿನ ಗೆಳೆತನ ಬಗ್ಗೆ ಕಾರ್ತಿಕ್ ಮಾತ್ರ ಇದುವರೆಗೂ ಗುಟ್ಟು ಬಿಟ್ಟುಕೊಟ್ಟಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.