ADVERTISEMENT

ವೇದಿಕೆ ಮೇಲೆ ನಟನಿಂದ ಅನುಚಿತ ವರ್ತನೆ: ಭೋಜ್‌ಪುರಿ ಚಿತ್ರರಂಗ ತೊರೆದ ನಟಿ ಅಂಜಲಿ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 4:47 IST
Last Updated 31 ಆಗಸ್ಟ್ 2025, 4:47 IST
<div class="paragraphs"><p>ಪವನ್‌ ಸಿಂಗ್ ಮತ್ತು&nbsp;ಅಂಜಲಿ ರಾಘವ್</p></div>

ಪವನ್‌ ಸಿಂಗ್ ಮತ್ತು ಅಂಜಲಿ ರಾಘವ್

   

ಲಖನೌ: ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಅನುಚಿತ ವರ್ತನೆ ತೋರಿದ ಭೋಜ್‌ಪುರಿ ನಟ ಪವನ್‌ ಸಿಂಗ್ ಅವರ ವಿರುದ್ಧ ಕಿಡಿಕಾರಿರುವ ನಟಿ ಅಂಜಲಿ ರಾಘವ್, ಚಿತ್ರರಂಗ ತೊರೆಯುವುದಾಗಿ ತಿಳಿಸಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾದ 'ಸೈಯಾ ಸೇವಾ ಕರೆ' ಆಲ್ಬಂನಲ್ಲಿ ಅಂಜಲಿ ಅವರು ಕಾಣಿಸಿಕೊಂಡಿದ್ದರು. ಇದರ ಪ್ರಚಾರದ ಭಾಗವಾಗಿ ಲಖನೌದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪವನ್‌ ಸಿಂಗ್ ಅವರ ಜೊತೆ ವೇದಿಕೆ ಹಂಚಿಕೊಂಡಿದ್ದರು. ಈ ವೇಳೆ ಪವನ್‌ ಅವರು ಅಂಜಲಿ ಅವರ ಸೊಂಟವನ್ನು ಮುಟ್ಟಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ADVERTISEMENT

ಈ ಬಗ್ಗೆ ಪ್ರತಿಕ್ರಿಯಿಸಿರುವ ಅಂಜಲಿ, ‘ನಟನ ವರ್ತನೆಯಿಂದ ತುಂಬಾ ನೋವಾಗಿದೆ. ಲೈಂಗಿಕ ದೌರ್ಜನ್ಯವನ್ನು ವೇದಿಕೆ ಮೇಲೆ ಖಂಡಿಸಿದಿರುವ ಬಗ್ಗೆ ಜನರು ನನ್ನನ್ನು ಪ್ರಶ್ನಿಸುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.

‘ಕಳೆದ ಎರಡು ದಿನಗಳಿಂದ ತುಂಬಾ ಚಿಂತಿತಳಾಗಿದ್ದೇನೆ. ಆ ಸಂದರ್ಭದಲ್ಲಿ ಯಾವುದೇ ಕ್ರಮ ತೆಗೆದುಕೊಳ್ಳದಿರುವುದಕ್ಕೆ ಜನರು ನನ್ನನ್ನು ದೂಷಿಸುತ್ತಿದ್ದಾರೆ. ನನ್ನ ನಗುವನ್ನು ಅಪಾರ್ಥ ಮಾಡಿಕೊಂಡಿದ್ದಾರೆ’ ಎಂದು ಬೇಸರ ಹೊರಹಾಕಿದ್ದಾರೆ.

‘ಅವರು ಯಾಕೆ ನನ್ನ ಸೊಂಟ ಮುಟ್ಟುತ್ತಿದ್ದರು ಎಂಬುದು ನನಗೆ ಗೊತ್ತಿರಲಿಲ್ಲ. ನಾನು ಹೊಸ ಸೀರೆ ಉಟ್ಟಿದ್ದೆ. ಸೀರೆ ಅಥವಾ ರವಿಕೆಯ ಟ್ಯಾಗ್ ಕಾಣಿಸುತ್ತಿದ್ದು, ಅದನ್ನು ಅವರು ನನಗೆ ಹೇಳಲು ಯತ್ನಿಸುತ್ತಿದ್ದಾರೆ ಎಂದು ನಾನು ಭಾವಿಸಿದ್ದೆ. ಆದ್ದರಿಂದಲೇ ನಾನು ಆ ಬಗ್ಗೆ ತಲೆಕೆಡಿಸಿಕೊಳ್ಳದೇ ನಗುತ್ತಾ ಪ್ರೇಕ್ಷಕರೊಂದಿಗೆ ಮಾತನಾಡುವುದನ್ನು ಮುಂದುವರಿಸಿದ್ದೆ’ ಎಂದು ಘಟನೆಯ ಬಗ್ಗೆ ವಿವರಿಸಿದ್ದಾರೆ.

ನಾನು ಮನೆಗೆ ಹಿಂದಿರುಗಿದಾಗಲೇ ನನಗೆ ಈ ಬಗ್ಗೆ ತಿಳಿಯಿತು ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.