ADVERTISEMENT

ಅಣ್ಣ From Mexico: ‘ಮೆಕ್ಸಿಕೊ’ದಿಂದ ಬಂದ ಧನಂಜಯ್‌

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2023, 18:58 IST
Last Updated 22 ಆಗಸ್ಟ್ 2023, 18:58 IST
ಚಿತ್ರದ ಪೋಸ್ಟರ್
ಚಿತ್ರದ ಪೋಸ್ಟರ್   

‘ಬಡವ ರಾಸ್ಕಲ್‌’ ಚಿತ್ರತಂಡ ಮತ್ತೆ ಒಂದಾಗಿದೆ. ಈ ಚಿತ್ರ ನಿರ್ದೇಶಿಸಿದ್ದ ಶಂಕರ್‌ಗುರು, ನಟ ಡಾಲಿ ಧನಂಜಯ್‌ ಜೊತೆ ‘ಅಣ್ಣ From Mexico’ ಸಿನಿಮಾ ಘೋಷಿಸಿದ್ದಾರೆ. ಧನಂಜಯ್‌ ಹುಟ್ಟುಹಬ್ಬದ ಪ್ರಯುಕ್ತ ಮಂಗಳವಾರ ತಡರಾತ್ರಿಯಿಂದಲೇ ಸಂಭ್ರಮ ಶುರುವಾಗಿದೆ. ಅವರ ನಟನೆಯ ಚಿತ್ರಗಳ ಟೀಸರ್‌, ಪೋಸ್ಟರ್‌ಗಳು ಬಿಡುಗಡೆಗೊಂಡಿವೆ.

2021ರಲ್ಲಿ ತೆರೆಗೆ ಬಂದ ಬಡವ ರಾಸ್ಕಲ್ ಸೂಪರ್ ಹಿಟ್ ಆಗಿತ್ತು. ಈ ಚಿತ್ರದ ಮೂಲಕ ಧನಂಜಯ್ ನಿರ್ಮಾಪಕರಾಗಿ ಬಡ್ತಿ ಪಡೆದಿದ್ದರು. ತಮ್ಮದೇ ಡಾಲಿ ಪಿಕ್ಚರ್ಸ್ ನಡಿ ನಿರ್ಮಿಸಿ ನಟಿಸಿದ್ದರು.

ಚಿತ್ರದ ಪೋಟ್ಸರ್‌ ಬಿಡುಗಡೆಗೊಂಡಿದ್ದು, ಧನಂಜಯ್‌ ಕೊರಳಿಗೆ ಕರ್ನಾಟಕ ಮ್ಯಾಪ್ ಇರುವ ಪದಕ ಧರಿಸಿ, ವಿಚಿತ್ರ ಅವತಾರದಲ್ಲಿ ಕುತೂಹಲ ಮೂಡಿಸಿದ್ದಾರೆ. ‘ಆ್ಯಕ್ಷನ್‌ನೊಂದಿಗೆ ಮನರಂಜನೆ ಚಿತ್ರವಾಗಿದ್ದು, ಅಜ್ಜಿ ಮೊಮ್ಮಗನ ಬಾಂಧವ್ಯದ ಕಥೆಯೂ ಸಿನಿಮಾದಲ್ಲಿರಲಿದೆ’ ಎಂದು ನಿರ್ದೇಶಕರು ಹೇಳಿದ್ದಾರೆ.

ADVERTISEMENT

ಸತ್ಯ ರಾಯಲ್ ನಿರ್ಮಾಣದಲ್ಲಿ ತಯಾರಾಗಲಿರುವ ಈ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನಿರ್ದೇಶನ ಮಾಡಲಿದ್ದು, ನವೆಂಬರ್ ತಿಂಗಳಿನಿಂದ ಶೂಟಿಂಗ್ ಶುರುವಾಗಲಿದೆ. ಮೆಕ್ಸಿಕೊ ಸೇರಿದಂತೆ ಹಲವೆಡೆ ಚಿತ್ರೀಕರಣ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ರೋಹಿತ್‌ ಪದಕಿ ನಿರ್ದೇಶಿಸಿ, ಧನಂಜಯ್‌ ನಟಿಸಿರುವ ‘ಉತ್ತರಕಾಂಡ’ ಚಿತ್ರದ ಟೀಸರ್‌ ಕೂಡ ಬಿಡುಗಡೆಗೊಂಡಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.