
ನವದೆಹಲಿ:‘ಹಿನ್ನೆಲೆ ಗಾಯನದಿಂದ ನಿವೃತ್ತಿ ತೆಗೆದುಕೊಳ್ಳುತ್ತಿರುವೆ. ಹೊಸದಾಗಿ ಯಾವುದೇ ಸಂಗೀತ ಕಾರ್ಯಕ್ರಮಗಳನ್ನು ಒಪ್ಪಿಕೊಳ್ಳುವುದಿಲ್ಲ’ ಎಂದು ಖ್ಯಾತ ಗಾಯಕ ಅರಿಜಿತ್ ಸಿಂಗ್ ಮಂಗಳವಾರ ಘೋಷಿಸಿದ್ದಾರೆ.
ವೃತ್ತಿಜೀವನದ ಉತ್ತುಂಗದಲ್ಲಿ ಇರುವಾಗಲೇ, 38 ವರ್ಷದ ಅರಿಜಿತ್ ಸಿಂಗ್ ಈ ಘೋಷಣೆ ಮಾಡಿರುವುದು, ಅವರ ಅಭಿಮಾನಿಗಳಲ್ಲಿ ಆಘಾತ–ನಿರಾಸೆಗೆ ಕಾರಣವಾಗಿದೆ.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಅವರು,‘ಹಿನ್ನೆಲೆ ಗಾಯನಕ್ಕೆ ವಿದಾಯ ಹೇಳಲು ನಿರ್ಧರಿಸಿರುವೆ. ಅದೊಂದು ಅದ್ಭುತ ಪಯಣ. ಇಷ್ಟು ವರ್ಷಗಳ ಕಾಲ ನನ್ನ ಹಾಡುಗಳನ್ನು ಕೇಳಿ, ಅಪಾರ ಪ್ರೀತಿ ತೋರಿಸಿದ್ದಕ್ಕೆ ಎಲ್ಲರಿಗೂ ಧನ್ಯವಾದ ಹೇಳಲು ಬಯಸುವೆ’ ಎಂದು ಹೇಳಿದ್ದಾರೆ.
‘ಸ್ವತಂತ್ರವಾಗಿ ಸಂಗೀತ ಸಂಯೋಜನೆ ಕಾರ್ಯವನ್ನು ಮುಂದುವರಿಸುವೆ ಹಾಗೂ ಈಗಾಗಲೇ ಕೈಗೆತ್ತಿಕೊಂಡಿರುವ ಯೋಜನೆಗಳನ್ನು ಪೂರ್ಣಗೊಳಿಸುವೆ’ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.