ADVERTISEMENT

ತೂಕ ಇಳಿಸಿಕೊಂಡಿರುವ ಅರ್ಜುನ್‌: ಮಲೈಕಾ ಪ್ರಶಂಸೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2019, 19:30 IST
Last Updated 1 ಜುಲೈ 2019, 19:30 IST
ಅರ್ಜುನ್‌ ಕಪೂರ್‌
ಅರ್ಜುನ್‌ ಕಪೂರ್‌   

ಅರ್ಜುನ್‌ ಕಪೂರ್‌ ಹಾಗೂ ಮಲೈಕಾ ಅರೋರಾ ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನುವ ಗುಸು ಗುಸು ಬಾಲಿವುಡ್‌ ಅಂಗಳದಲ್ಲಿ ಆರಂಭವಾದಾಗಿನಿಂದ ಅಭಿಮಾನಿಗಳು ಅವರನ್ನು ಸೂಕ್ಷ್ಮವಾಗಿ ಗಮನಿಸಲು ಆರಂಭಿಸಿದ್ದಾರೆ.

ತೂಕ ಇಳಿಸಿಕೊಂಡಿರುವುದಾಗಿ ಸರಣಿ ಚಿತ್ರಗಳನ್ನು ಹಾಕಿರುವ ಅರ್ಜುನ್‌ ಕಪೂರ್‌ ಅವರ ಟ್ವೀಟ್‌ಗೆ ಮಲೈಕಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಅವರ ಅಭಿಮಾನಿಗಳ ಕುತೂಹಲವನ್ನು ಹೆಚ್ಚಿಸಿದೆ. ಅಲ್ಲದೇ ಮಸಾಲೆಭರಿತ ಸಂದೇಶಗಳೊಂದಿಗೆ ಇದನ್ನು ಶೇರ್‌ ಮಾಡುತ್ತಿದ್ದಾರೆ.

‘ಫೇಥ್‌ ಆ್ಯಂಡ್ ಹಾರ್ಡ್‌ ವರ್ಕ್‌ ಅರ್ಜುನ್‌’ ಎಂದು ಮಲೈಕಾ ಕಮೆಂಟ್ ಬರೆದಿದ್ದಾರೆ. ಅರ್ಜುನ್‌ ತಂಗಿ ಅಂಶುಲಾ ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ADVERTISEMENT

ಏಪ್ರಿಲ್‌ ತಿಂಗಳಿನಲ್ಲಿ ಚರ್ಚ್‌ನಲ್ಲಿ ಅರ್ಜುನ್‌ ಹಾಗೂ ಮಲೈಕಾ ಮದುವೆಯಾಗಿದ್ದಾರೆ ಎನ್ನುವ ವದಂತಿಗೆ ನಟ, ನಟಿ ಇಬ್ಬರೂ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅರ್ಬಾಜ್‌ ಖಾನ್‌ ಜೊತೆಗಿನ ವೈವಾಹಿಕ ಸಂಬಂಧದಿಂದ ವಿಚ್ಛೇದನ ಪಡೆದ ನಂತರಮಲೈಕಾ ಈಗ ಅರ್ಜುನ್ ಜೊತೆಗೆ ಓಡಾಡುವ ಮೂಲಕ ಕೆಲವರ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ಇದೆಲ್ಲದರಿಂದ ತಲೆ ಕೆಡಿಸಿಕೊಳ್ಳದ ಜೋಡಿಮಾಧ್ಯಮಗಳ ಕಣ್ಣಿಗೆ ಒಟ್ಟಾಗಿ ಕಾಣಿಸಿಕೊಂಡು ಬೋಲ್ಡ್‌ ನಡೆಯನ್ನು ಪ್ರದರ್ಶಿಸುತ್ತಲೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.