ADVERTISEMENT

Sandalwood: ಅರ್ಜುನ್‌ ಸರ್ಜಾ ನಿರ್ದೇಶನದ ಸೀತಾ ಪಯಣ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2025, 23:30 IST
Last Updated 6 ಮಾರ್ಚ್ 2025, 23:30 IST
ಐಶ್ವರ್ಯಾ, ನಿರಂಜನ್‌
ಐಶ್ವರ್ಯಾ, ನಿರಂಜನ್‌   

ಖ್ಯಾತ ನಟ, ನಿರ್ದೇಶಕ ಅರ್ಜುನ್‌ ಸರ್ಜಾ ಮತ್ತೆ ನಿರ್ದೇಶನಕ್ಕಿಳಿದಿದ್ದಾರೆ. ತಮ್ಮ ಪುತ್ರಿಗಾಗಿ ‘ಸೀತಾ ಪಯಣ’ ಚಿತ್ರವನ್ನು ನಿರ್ದೇಶಿಸಿ, ನಿರ್ಮಾಣ ಮಾಡುತ್ತಿದ್ದಾರೆ. 

ಉಪೇಂದ್ರನ ಅಣ್ಣನ ಮಗ ನಿರಂಜನ್‌ಗೆ ಐಶ್ವರ್ಯಾ ಜೋಡಿಯಾಗಿದ್ದಾರೆ. ಸರ್ಜಾ ಈ ಹಿಂದೆ ‘ಜೈ ಹಿಂದ್’ ಮತ್ತು ‘ಅಭಿಮನ್ಯು’, ‘ ಪ್ರೇಮಬರಹ’ ಸಿನಿಮಾಗಳಿಗೆ ಆ್ಯಕ್ಷನ್‌ ಕಟ್‌ ಹೇಳಿದ್ದರು. 

‘ಶೀರ್ಷಿಕೆಯೇ ಸೂಚಿಸುವಂತೆ ಇದೊಂದು ಪಯಣ ಕುರಿತಾದ ಚಿತ್ರವಾಗಿದ್ದು, ಅಭಿ ಮತ್ತು ಸೀತಾ ಎಂಬ ಹದಿಹರೆಯದವರ ಭಾವನಾತ್ಮಕ ಪಯಣವಿದೆ. ಈಗಾಗಲೇ ಚಿತ್ರದ ಡಬ್ಬಿಂಗ್‌ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಏಪ್ರಿಲ್‌ನಲ್ಲಿ ಈ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ’ ಎಂದಿದೆ ಚಿತ್ರತಂಡ.

ADVERTISEMENT

ಪ್ರಕಾಶ್‍ ರಾಜ್‌, ಸತ್ಯರಾಜ್‍ ಮುಂತಾದವರು ನಟಿಸಿದ್ದಾರೆ. ಅರ್ಜುನ್‌ ಸರ್ಜಾ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಅನುಪ್‌ ರುಬೆನ್ಸ್‌ ಸಂಗೀತ, ಬಾಲಮುರುಗನ್‌ ಛಾಯಾಚಿತ್ರಗ್ರಹಣವಿದೆ. ‘ದೃಶ್ಯಂ’ ಸಿನಿಮಾ ಖ್ಯಾತಿಯ ಸಂಕಲನಕಾರ ಆಯೂಬ್‌ ಖಾನ್‌ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಕನ್ನಡ, ತೆಲುಗು ಮತ್ತು ತಮಿಳಿನಲ್ಲಿ ಚಿತ್ರ ಸಿದ್ಧಗೊಳ್ಳುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.