ADVERTISEMENT

ನೈಜ ಘಟನೆ ಆಧಾರಿತ ‘ಡಿಯರ್‌ ಸತ್ಯ’

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2022, 9:29 IST
Last Updated 7 ಮಾರ್ಚ್ 2022, 9:29 IST
ಡಿಯರ್‌ ಸತ್ಯ
ಡಿಯರ್‌ ಸತ್ಯ   

ನಟ ಆರ್ಯನ್ ಸಂತೋಷ್ ಹಾಗೂ ನಟಿ ಅರ್ಚನಾ ಕೊಟ್ಟಿಗೆ ಅಭಿನಯದ ‘ಡಿಯರ್‌ ಸತ್ಯ’ ಸಿನಿಮಾ ಮಾರ್ಚ್‌ 10ರಂದು ರಿಲೀಸ್‌ ಆಗಲಿದೆ. ನಟ ಶ್ರೀಮುರಳಿ ಇತ್ತೀಚೆಗೆ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿದರು.

ಪರ್ಪಲ್ ರಾಕ್ ಎಂಟರ್‌ಟೈನರ್ ಹಾಗೂ ವಿಂಟರ್ ಬ್ರಿಡ್ಜ್ ಸ್ಟುಡಿಯೋಸ್ ಲಾಂಛನದಲ್ಲಿ ಗಣೇಶ್ ಪಾಪಣ್ಣ, ಯತೀಶ್ ವೆಂಕಟೇಶ್, ಶ್ರೀನಿವಾಸ್ ಶ್ರೀಭಕ್ತ ಹಾಗೂ ಅಜಯ್ ಅಪರೂಪ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ.

‘ಈ ಚಿತ್ರವನ್ನು ಮೊದಲು ತಮಿಳಿನಲ್ಲಿ ಮಾಡಬೇಕೆಂದುಕೊಂಡಿದ್ದೆ. ಚೆನ್ನೈನ ಹೈಕೋರ್ಟ್ ಎದುರು ಪ್ಯಾರಿಸ್ ಕಾರ್ನರ್ ಎಂಬ ಸ್ಥಳವಿದೆ. ಆ ಜಾಗವೇ ನನಗೆ ಕಥೆ ರಚಿಸಲು ಸ್ಪೂರ್ತಿ. ಇದೊಂದು ನೈಜಘಟನೆ ಆಧಾರಿತ ಚಿತ್ರ. ಕಥೆ ಸಿದ್ಧಮಾಡಿಕೊಂಡ ಮೇಲೆ ನಿರ್ಮಾಪಕರ ಹುಡುಕಾಟದಲ್ಲಿ ಸಾಕಷ್ಟು ವರ್ಷ ಕಳೆದಿದ್ದೇನೆ.‌ ಚಿತ್ರೀಕರಣ ಮುಗಿದ ತಕ್ಷಣ ಕೋವಿಡ್ ಶುರುವಾಯಿತು. ಹೀಗಾಗಿ ಬಿಡುಗಡೆ ವಿಳಂಬವಾಯಿತು’ ಎಂದರು ಆರ್ಯನ್ ಸಂತೋಷ್.

ADVERTISEMENT

ಚಿತ್ರದಲ್ಲಿ ನಟ ಉಪೇಂದ್ರ ಅವರು ಕೆಲ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಶ್ರೀಧರ್‌ ವಿ. ಸಂಭ್ರಮ್‌ ಸಂಗೀತ ನಿರ್ದೇಶನ ನೀಡಿರುವ ಈ ಚಿತ್ರಕ್ಕೆ ವಿನೋದ್‌ ಭಾರತಿ ಛಾಯಾಗ್ರಹಣವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.