ADVERTISEMENT

‘ಆಸ್ಟಿನ್‌ನ ಮಹಾನ್‌ ಮೌನ’ ಚಿತ್ರದ ಟೀಸರ್‌ ಹಾಡು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 0:00 IST
Last Updated 13 ಆಗಸ್ಟ್ 2025, 0:00 IST
<div class="paragraphs"><p>ಚಿತ್ರತಂಡ</p></div>

ಚಿತ್ರತಂಡ

   

ವಿನಯ್ ಕುಮಾರ್ ವೈದ್ಯನಾಥನ್ ನಟಿಸಿ ನಿರ್ದೇಶಿಸಿರುವ ‘ಆಸ್ಟಿನ್‌ನ ಮಹಾನ್‌ ಮೌನ’ ಚಿತ್ರದ ಟೀಸರ್‌ ಹಾಗೂ ಹಾಡುಗಳು ಇತ್ತೀಚೆಗಷ್ಟೇ ಬಿಡುಗಡೆಗೊಂಡಿವೆ. 

‘ನಾನು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಮುಗಿಸಿ ಚಿತ್ರರಂಗಕ್ಕೆ ಬಂದೆ. ಹಲವು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ ಹಲವು ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವವಿದೆ. 13 ವರ್ಷಗಳ ನಂತರ ನನ್ನ ಕನಸು ನನಸಾಗುತ್ತಿದೆ. ಈ ಚಿತ್ರದಲ್ಲಿ ನಾನೇ ನಟಿಸಿ ನಿರ್ದೇಶನದ ಜೊತೆ ನಿರ್ಮಾಣ ಕೂಡ ಮಾಡಿದ್ದೇನೆ. ಭಾವನಾತ್ಮಕ ಲವ್ ಥ್ರಿಲ್ಲಿಂಗ್ ಕಥೆಯನ್ನು ಹೊಂದಿದೆ.

ADVERTISEMENT

‘ಆಸ್ಟಿನ್’ ಎನ್ನುವುದು ನಾಯಕನ ಪಾತ್ರದ ಹೆಸರು’ ಎಂದರು ನಿರ್ದೇಶಕರು.  ಮೈಸೂರಿನ ಪ್ರಕೃತಿ ಪ್ರಸಾದ್ ಮತ್ತೋರ್ವ ನಾಯಕಿ. ವಿಶ್ವಿ ಸಂಗೀತ ನಿರ್ದೇಶನವಿದ್ದು ಆರು ಹಾಡುಗಳಿವೆ. ಒಂದು ಹಾಡು ಲ್ಯಾಟಿನ್ ಭಾಷೆಯಲ್ಲಿದೆ. ಬಲ ರಾಜವಾಡಿ ರಘು ರಾಮನಕೊಪ್ಪ ಜಗಪ್ಪ ಸ್ವಾತಿ ಸೇರಿದಂತೆ ಹಲವಾರು ಕಲಾವಿದರು ಅಭಿನಯಿಸಿದ್ದಾರೆ. ರಾಜಕಾಂತ್ ಛಾಯಾಚಿತ್ರಗ್ರಹಣ ಶ್ರೀನಿವಾಸ್ ಹಾಗೂ ಶಶಿಧರ್ ಸಂಕಲನವಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.