ADVERTISEMENT

ಅ. 14ಕ್ಕೆ ‘ಆಯುಷ್ಮಾನ್‌ಭವ’ ಸಿನಿಮಾದ ಟೀಸರ್‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2019, 11:26 IST
Last Updated 11 ಅಕ್ಟೋಬರ್ 2019, 11:26 IST
‘ಆಯುಷ್ಮಾನ್‌ಭವ’ ಚಿತ್ರದಲ್ಲಿ ರಚಿತಾ ರಾಮ್‌ ಮತ್ತು ಶಿವರಾಜ್‌ಕುಮಾರ್
‘ಆಯುಷ್ಮಾನ್‌ಭವ’ ಚಿತ್ರದಲ್ಲಿ ರಚಿತಾ ರಾಮ್‌ ಮತ್ತು ಶಿವರಾಜ್‌ಕುಮಾರ್   

ಪಿ. ವಾಸು ನಿರ್ದೇಶನದ ‘ಸೆಂಚುರಿ ಸ್ಟಾರ್‌’ ಶಿವರಾಜ್‌ಕುಮಾರ್‌ ನಟನೆಯ ‘ಆಯುಷ್ಮಾನ್‌ಭವ’ ಚಿತ್ರದ ಟೀಸರ್‌ ಅಕ್ಟೋಬರ್ 14ರಂದು ಬಿಡುಗಡೆಯಾಗಲಿದೆ.

ಶಿವಣ್ಣ ಅವರಿಗೆ ನಟಿ ರಚಿತಾ ರಾಮ್‌ ಜೋಡಿಯಾಗಿದ್ದಾರೆ. ಈ ಚಿತ್ರಕ್ಕೆ ‘ಆನಂದ್‌’ ಎಂದು ಹೆಸರಿಡಲಾಗಿತ್ತು. ಆದರೆ, ಚಿತ್ರಕಥೆಗೂ ಮತ್ತು ಟೈಟಲ್‌ಗೆ ಹೊಂದಾಣಿಕೆಯಾಗದ ಪರಿಣಾಮ ‘ಆಯುಷ್ಮಾನ್‌ಭವ’ ಎಂದು ಹೆಸರಿಡಲಾಗಿದೆ. ದ್ವಾರಕೀಶ್‌ ಚಿತ್ರಾಲಯ ಸಂಸ್ಥೆಯಿಂದ ಈ ಚಿತ್ರ ನಿರ್ಮಿಸಲಾಗಿದ್ದು, ನವೆಂಬರ್‌ 1ರಂದು ತೆರೆ ಕಾಣುತ್ತಿದೆ.

‘ಪಂಚರಂಗಿ’ ಬೆಡಗಿ ನಿಧಿ ಸುಬ್ಬಯ್ಯ ಈ ಚಿತ್ರದ ಮೂಲಕ ವೃತ್ತಿಬದುಕಿನ ಎರಡನೇ ಇನ್ನಿಂಗ್ಸ್‌ ಆರಂಭಿಸುತ್ತಿರುವ ಖುಷಿಯಲ್ಲಿದ್ದಾರೆ. ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ತಕ್ಕಂತೆ ಗ್ರಾಫಿಕ್ಸ್ ತಂತ್ರಗಾರಿಕೆ ಹೆಣೆಯಲಾಗಿದೆ. ಒಂದು ಕಾಲು ಗಂಟೆಗೂ ಹೆಚ್ಚು ಸಮಯದ ವಿಷುವಲ್ ಎಫೆಕ್ಟ್ ಇದೆ.ಪಿ.ಕೆ.ಎಚ್‌. ದಾಸ್ ಅವರ ಛಾಯಾಗ್ರಹಣವಿದೆ. ಚಿತ್ರದ ಐದು ಹಾಡುಗಳಿಗೆ ಗುರುಕಿರಣ್‌ ಸಂಗೀತ ಸಂಯೋಜಿಸಿದ್ದಾರೆ. ಅನಂತನಾಗ್, ಸುಹಾಸಿನಿ ಮಣಿರತ್ನಂ, ಸುಧಾರಾಣಿ, ಶಿವಾಜಿ ಪ್ರಭು, ಜೈಜಗದೀಶ್, ಸುಧಾ ಬೆಳವಾಡಿ ತಾರಾಗಣದಲ್ಲಿದ್ದಾರೆ.

ADVERTISEMENT

‘ಅ. 14ರಂದು ಮಧ್ಯಾಹ್ನ 12ಗಂಟೆಗೆ ಟೀಸರ್‌ ಬಿಡುಗಡೆಯಾಗುತ್ತಿದ್ದು, ಎಲ್ಲರೂ ನೋಡಿ ಪ್ರೋತ್ಸಾಹ ನೀಡಬೇಕು’ ಎಂದು ಶಿವರಾಜ್‌ಕುಮಾರ್‌ ಟ್ವಿಟರ್‌ನಲ್ಲಿ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.