ಮುಂಬೈ: ಟೈಗರ್ ಶ್ರಾಫ್ ಅಭಿನಯದ ‘ಭಾಗಿ–3’ ಚಿತ್ರದಟ್ರೇಲರ್ ಗುರುವಾರ ಯುಟ್ಯೂಬ್ನಲ್ಲಿ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿಭರ್ಜರಿಯಾಗಿ ಸದ್ದು ಮಾಡುತ್ತಿದೆ.
ಇತ್ತೀಚೆಗಷ್ಟೇ ಈ ಚಿತ್ರದ ಪೋಸ್ಟರ್ ಕೂಡ ವೈರಲ್ ಆಗಿತ್ತು.
ಭಾಗಿ-3 ಚಿತ್ರದ ಟ್ರೇಲರ್ ಬಿಡುಗಡೆಯಾಗಿ 2ಗಂಟೆಯಲ್ಲಿಸುಮಾರು 5 ಲಕ್ಷ ಜನರುಅದನ್ನು ವೀಕ್ಷಿಸಿದ್ದಾರೆ. ಇದು ಶ್ರಾಫ್ ಅವರ ಸಿಕ್ಸ್ ಪ್ಯಾಕ್ ಮೈಕಟ್ಟು, ಮೈನವಿರೇಳಿಸುವ ಆಕ್ಷನ್ಗೆ ಅಭಿಮಾನಿಗಳು ಫಿದಾ ಆಗಿರುವುದಕ್ಕೆ ಸಾಕ್ಷಿಯಾಗಿದೆ. ಮಾರ್ಚ್ 6 ರಂದು ಚಿತ್ರ ಬಿಡುಗಡೆಯಾಗಲಿದೆ.
ಅಹ್ಮದ್ ಖಾನ್ ನಿರ್ದೇಶನದ ಭಾಗಿ 3 ಚಲನಚಿತ್ರವು ಭಾಗಿ ಸರಣಿಯ ಮೂರನೇ ಚಿತ್ರ. ಈ ಹಿಂದೆ ಭಾಗಿ–1 ಮತ್ತು 2 ಎರಡೂ ಬಾಕ್ಸ್ ಆಫೀಸ್ ಸೂಪರ್ ಹಿಟ್ ಸಿನಿಮಾಗಳಾಗಿದ್ದವು. ಈಗ ಅದೇ ಸರಣಿಯಲ್ಲಿ ಈ ಚಿತ್ರ ತಯಾರಾಗುತ್ತಿದೆ. ಈ ಹಿಂದಿನ ಚಿತ್ರಗಳಂತೆ ಈ ಚಿತ್ರದಲ್ಲಿಯೂ ಟೈಗರ್ ಶ್ರಾಫ್ ‘ರಾನಿ’ ಹೆಸರಿನ ಮುಖ್ಯಪಾತ್ರದಲ್ಲಿದ್ದಾರೆ.
‘ಭಾಗಿ 1’ರಲ್ಲಿ ನಾಯಕಿಯಾಗಿದ್ದ ಶ್ರದ್ಧಾ ಕಪೂರ್ ಈ ಚಿತ್ರದ ಮೂಲಕ ‘ಭಾಗಿ’ ಸರಣಿಯಲ್ಲಿ ಮತ್ತೆ ನಾಯಕಿಯಾಗುತ್ತಿದ್ದಾರೆ. ‘ಭಾಗಿ 3’ ಚಿತ್ರದ ಪೋಸ್ಟರ್ನಲ್ಲಿರುವ ‘ಈ ಬಾರಿ ದೇಶವೊಂದರ ವಿರುದ್ಧ’ ಎನ್ನುವ ಸಾಲು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಈ ಹಿಂದೆ ಪೋಸ್ಟರ್ ಬಿಡುಗಡೆಯಾದ ಸಂದರ್ಭದಲ್ಲಿಟೈಗರ್ ಶ್ರಾಫ್ ತಮ್ಮತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಚಿತ್ರದ ಪೋಸ್ಟರ್ ಹಂಚಿಕೊಂಡು ‘ಶಕ್ತಿಶಾಲಿ ಶತ್ರುಗಳ ವಿರುದ್ಧ, ದೇಶವೊಂದರ ವಿರುದ್ಧ ದೊಡ್ಡ ಯುದ್ಧಕ್ಕಾಗಿ ರಾನಿ ಮತ್ತೆ ಬಂದಿದ್ದಾನೆ’ ಎಂದು ಬರೆದುಕೊಂಡಿದ್ದರು.
ಈ ಚಿತ್ರವನ್ನು ಸಾಜಿದ್ ನಡಿಯಾವಾಲಾ ನಿರ್ಮಾಣ ಮಾಡಿದ್ದಾರೆ.ಖ್ಯಾತ ನಟಿ ಅಂಕಿತಾ ಲೋಖಂಡೆ, ರಿತೇಶ್ ದೇಶ್ಮುಖ್ ಸೇರಿದಂತೆ ಹಲವರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.