ADVERTISEMENT

ತಾಪ್ಸಿ ಪಾತ್ರಕ್ಕೆ ಹೆದರಿದ್ದ ಸಹೋದರಿ

​ಪ್ರಜಾವಾಣಿ ವಾರ್ತೆ
Published 30 ಜೂನ್ 2019, 12:04 IST
Last Updated 30 ಜೂನ್ 2019, 12:04 IST
ತಾಪ್ಸಿ ಪನ್ನು
ತಾಪ್ಸಿ ಪನ್ನು   

ಸಿದ್ದಮಾದರಿಗಳನ್ನು ಮುರಿದು ಬಾಲಿವುಡ್‌ನಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡಿರುವ ನಟಿ ತಾಪ್ಸಿ ಪನ್ನು, ಇತ್ತೀಚೆಗಷ್ಟೇ ಬಿಡುಗಡೆಯಾದ ‘ಬದ್ಲಾ’ ಸಿನಿಮಾದಲ್ಲಿ ಖಳನಾಯಕಿಯ ಪಾತ್ರದಲ್ಲಿ ಮಿಂಚಿದ್ದರು.

ತಾಪ್ಸಿ ಅವರ ಹೊಸ ಅವತಾರವನ್ನು ನೋಡಿ ಅವರ ಸಹೋದರಿ ಹೆದರಿದ್ದರಂತೆ. ಮನೆಯಲ್ಲೂ ಸಿನಿಮಾದ ಬಗ್ಗೆಯೇ ಯೋಚಿಸುತ್ತಿದ್ದ ಅವರು ಪಾತ್ರಕ್ಕೆ ಜೀವಂತಿಕೆ ತುಂಬುವುದರ ಬಗ್ಗೆ ಹೆಚ್ಚು ಗಮನಹರಿಸಿದ್ದರಂತೆ.

ಕ್ರಿಮಿನಲ್‌ಗಳ ಹಾವಭಾವ, ಅವರ ನಡೆದುಕೊಳ್ಳುವ ರೀತಿ, ತಮ್ಮಲ್ಲಿರುವ ಕೆಟ್ಟ ಗುಣಗಳನ್ನು ಮುಚ್ಚಿಟ್ಟುಕೊಳ್ಳಲು ಅವರು ಪ್ರಯತ್ನಿಸುವ ವಿಧಾನಗಳನ್ನು ಅವರು ಮನೆಯಲ್ಲಿ ಅಭ್ಯಾಸ ಮಾಡುತ್ತಿದ್ದರು ಎನ್ನಲಾಗಿದೆ.

ADVERTISEMENT

‘ಸಿನಿಮಾ ನೋಡುವಾಗ, ತಾಪ್ಸಿ ನಿಜವಾಗಲೂ ಯಾರನ್ನಾದರೂ ಕೊಂದುಬಿಟ್ಟರೆ ಎಂದು ನಾನು ಹೆದರಿಕೊಂಡಿದ್ದೆ’ ಎಂದು ಅವರ ಸಹೋದರಿ ಶಗುನ್‌ ಪನ್ನು ಹೇಳಿಕೊಂಡಿದ್ದಾರೆ.

‘ಮಾನಸಿಕವಾಗಿ ಈ ಪಾತ್ರ ನನಗೆ ಸವಾಲಿನಿಂದ ಆಗಿತ್ತು. ಮನೆಯಲ್ಲಿ ಎಲ್ಲರೂ ಈ ಪಾತ್ರ ನೆಗಿಟಿವ್‌ ಆಗಿದೆ ಎಂದಿದ್ದರು. ನನಗೂ ಹಾಗೇ ಅನ್ನಿಸಿತ್ತು. ಆದರೆ ಈ ರೀತಿಯ ಹೊಸ ಸವಾಲುಗಳು ಬದುಕಿನ ಪಾಠ ಕಲಿಸುತ್ತವೆ’ ಎಂದು ತಾಪ್ಸಿ ಹೇಳಿದ್ದಾರೆ.

‘ಈ ಪಾತ್ರದ ಬಳಿಕ ಕಾರ್‌ನಲ್ಲಿ ಪ್ರಯಾಣ ಮಾಡುವಾಗ ಭಯ ಆಗುತ್ತಿತ್ತು’ ಎಂದೂ ಅವರು ಹೇಳಿಕೊಂಡಿದ್ದಾರೆ.

ಅನುರಾಗ್ ಕಶ್ಯಪ್‌ ಅವರ ‘ಸಾಂಡ್‌ ಕಿ ಆಂಖ್‌’ ಸಿನಿಮಾದಲ್ಲಿ ತಾಪ್ಸಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ಶಾರ್ಪ್‌ ಶೂಟರ್‌ ಪಾತ್ರ ನಿರ್ವಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.