ADVERTISEMENT

ನಟ ಜಗ್ಗೇಶ್ ಅಭಿನಯದ ‘ತೋತಾಪುರಿ’ ಚಿತ್ರದ ‘ಬಾಗ್ಲು ತೆಗಿ ಮೇರಿ ಜಾನ್’ ಹಾಡಿನ ಮೋಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಫೆಬ್ರುವರಿ 2022, 6:57 IST
Last Updated 10 ಫೆಬ್ರುವರಿ 2022, 6:57 IST
‘ತೋತಾಪುರಿ’ ಸಿನಿಮಾದಲ್ಲಿ ಜಗ್ಗೇಶ್ ಮತ್ತು ಅದಿತಿ ಪ್ರಭುದೇವ
‘ತೋತಾಪುರಿ’ ಸಿನಿಮಾದಲ್ಲಿ ಜಗ್ಗೇಶ್ ಮತ್ತು ಅದಿತಿ ಪ್ರಭುದೇವ    

ಬೆಂಗಳೂರು: ‘ನೀರ್‌ದೋಸೆ’ ಖ್ಯಾತಿಯ ವಿಜಯ್‌ ಪ್ರಸಾದ್‌ –ಜಗ್ಗೇಶ್‌ ಜೋಡಿ ಇದೀಗ ‘ತೋತಾಪುರಿ’ ಸಿನಿಮಾದಲ್ಲಿ ಒಂದಾಗಿದ್ದು, ಅಭಿಮಾನಿಗಳನ್ನು ರಂಜಿಸಲು ಸಜ್ಜಾಗಿದೆ.

ಸದ್ಯ ಸಿನಿಮಾದ ಟೀಸರ್​ ಪ್ರೋಮೊ, ಹಾಡು ಬಿಡುಗಡೆ ಆಗಿದ್ದು, ಶೀಘ್ರವೇ ಪ್ರೇಕ್ಷಕರ ಎದುರು ಬರುವ ಮೂನ್ಸೂಚನೆ ಕೊಟ್ಟಿದ್ದಾರೆ.

ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಇತ್ತೀಚಿಗೆ ಯುಟ್ಯೂಬ್‌ನಲ್ಲಿ ಮೊದಲ ಹಾಡನ್ನು ಬಿಡುಗಡೆ ಮಾಡಿತ್ತು. ಇದೀಗ ಹಾಡಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ADVERTISEMENT

ಅದಿತಿ ಪ್ರಭುದೇವ ಮತ್ತು ಜಗ್ಗೇಶ್ ಕಾಣಿಸಿಕೊಂಡಿರುವ ‘ಬಾಗ್ಲು ತೆಗಿ ಮೇರಿ ಜಾನ್’ ಹಾಡು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್‌ ಆಗಿದ್ದು, ಸಿನಿಮಾದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಯೂಟ್ಯೂನ್‌ನಲ್ಲಿ ಈ ಹಾಡು 68.64 ಲಕ್ಷ ವೀಕ್ಷಣೆ ಪಡೆದುಕೊಂಡಿದ್ದು, ಚಿತ್ರತಂಡದ ಸಂತಸಕ್ಕೆ ಕಾರಣವಾಗಿದೆ.

ಚಿತ್ರದ ಹಾಡುಗಳಿಗೆ ವಿಜಯ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ಅನೂಪ್ ಸಿಲೀನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ‘ಬಗ್ಲು ತೆಗೆ ಮೇರಿ ಜಾನ್..’ ಹಾಡಿಗೆ ವಾಸರಾಜ್ ಸೋಸಲೆ, ಅನನ್ಯ ಭಟ್ ಮತ್ತು ಸುಪ್ರಿಯಾ ರಾಮ್ ಧ್ವನಿ ನೀಡಿದ್ದಾರೆ.

ಈ ಹಾಡಿನ ಮೂಲಕ ಜಗ್ಗೇಶ್ –ಅದಿತಿ ಜೋಡಿ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಈ ಸಿನಿಮಾವನ್ನು ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ತೀರ್ಮಾನಿಸಿದೆ.

ಎರಡು ಭಾಗಗಳಲ್ಲಿ ಈ ಚಿತ್ರವು ತೆರೆಗೆ ಬರಲಿದ್ದು, ಚಿತ್ರದಲ್ಲಿ ಅದಿತಿ ಪ್ರಭುದೇವ, ಸುಮನ್‌ ರಂಗನಾಥ್‌, ಡಾಲಿ ಧನಂಜಯ್, ವೀಣಾ ಸುಂದರ್‌ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ.

ಕೆ.ಎ. ಸುರೇಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.