ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿರುವ ‘ತಾಯಿ ಕಸ್ತೂರ್ ಗಾಂಧಿ’ ಚಿತ್ರ ಮಾ.28 ರಿಂದ ಅಮೆಜಾನ್ ಪ್ರೈಮ್‌ನಲ್ಲಿ ವೀಕ್ಷಕರಿಗೆ ಲಭ್ಯವಾಗಲಿದೆ.
ಕಸ್ತೂರ್ ಬಾ ಅವರನ್ನೇ ಕೇಂದ್ರವಾಗಿಟ್ಟುಕೊಂಡು ಸಿದ್ಧಗೊಂಡ ಈ ಚಿತ್ರವು ಹಲವು ಚಿತ್ರೋತ್ಸವಗಳಿಗೆ ಆಯ್ಕೆಗೊಂಡಿತ್ತು. ಬರಗೂರರ ಕಾದಂಬರಿಯನ್ನು ಆಧರಿಸಿದ ಚಿತ್ರವಿದು. ‘ಕಸ್ತೂರ್ ಬಾ ಅವರ ಬದುಕಿನ ಕೆಲವು ಪ್ರಮುಖ ಘಟನೆಗಳನ್ನು ಈ ಚಿತ್ರದಲ್ಲಿ ತೋರಿಸಿದ್ದೇವೆ. ತಾಯಿ, ಪತ್ನಿ ಮತ್ತು ಹೋರಾಟಗಾರ್ತಿಯಾಗಿ ಅವರು ಬದುಕನ್ನು ನಿಭಾಯಿಸಿದ ರೀತಿ ಎಲ್ಲರಿಗೂ ಸ್ಫೂರ್ತಿಯಾಗಿದೆ’ ಎಂದಿದ್ದಾರೆ ಬರಗೂರು.
ಕಸ್ತೂರ್ ಬಾ ಪಾತ್ರದಲ್ಲಿ ಹರಿಪ್ರಿಯ ಮತ್ತು ಗಾಂಧಿಯಾಗಿ ಕಿಶೋರ್ ನಟಿಸಿದ್ದಾರೆ. ಶ್ರೀನಾಥ್ ಅಂಬೇಡ್ಕರ್ ಪಾತ್ರದಲ್ಲಿದ್ದಾರೆ. ಮಾಸ್ಟರ್ ಆಕಾಂಕ್ಷ್ ಬರಗೂರು, ಸುಂದರರಾಜು, ಪ್ರಮೀಳಾ ಜೋಷಾಯ್, ಮುಂತಾದವರು ತಾರಾಗಣದಲ್ಲಿದ್ದಾರೆ.
ಜನಮಿತ್ರ ಮೂವೀಸ್ ನಿರ್ಮಾಣವಿದೆ. ಶಮಿತಾ ಮಲ್ನಾಡ್ ಸಂಗೀತ, ನಾಗರಾಜ ಆದವಾನಿ ಛಾಯಾಚಿತ್ರಗ್ರಹಣ, ಸುರೇಶ್ ಅರಸು ಸಂಕಲನವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.