ADVERTISEMENT

ದರೋಡೆಕೋರರಲ್ಲೂ ಹೂ ಮನಸ್ಸೇ?

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2023, 19:31 IST
Last Updated 10 ಫೆಬ್ರುವರಿ 2023, 19:31 IST
ನಮೃತಾ ಅಗಸಿಮನಿ, ಸಲಗ ಸೂರಿಯಣ್ಣ
ನಮೃತಾ ಅಗಸಿಮನಿ, ಸಲಗ ಸೂರಿಯಣ್ಣ   

ಕಟುಕನಿಗೂ ಒಳ್ಳೆಯ ಹೃದಯವಿರುತ್ತದೆ ಎಂದು ಹೇಳಲು ಹೊರಟಿದೆ ‘ಮಾರಿಗುಡ್ಡದ ಗಡ್ಡಧಾರಿಗಳು’. ಹೊಸಮುಖಗಳೇ ಕಾಣಿಸಿಕೊಂಡಿರುವ ಚಿತ್ರವಿದು.

‘90ರ ಕಾಲಘಟ್ಟದಲ್ಲಿ ಕಾಲ್ಪನಿಕ ಮಾರಿಗುಡ್ಡ ಎಂಬ ಸ್ಥಳದಲ್ಲಿ ಗಡ್ಡಧಾರಿಗಳಾದ ದರೋಡೆಕೋರರ ಗುಂಪಿನ ಕಥೆಯಿದು. ಒಂದೆಡೆ ದರೋಡೆಯ ಕಥೆಯಾದರೆ ಇನ್ನೊಂದು ಪಥದಲ್ಲಿ ಪ್ರೇಮಕಥೆ ತೆರೆದುಕೊಳ್ಳುತ್ತದೆ. ಚಿತ್ರದ ಕೊನೆಯಲ್ಲಿ ಎಲ್ಲ ಆಯಾಮಗಳು ಸೇರುತ್ತವೆ. ಕೋಲಾರ, ನರಸಾಪುರಘಟ್ಟ, ಏರೋಹಳ್ಳಿ ಘಟ್ಟ, ಕೆಜಿಎಫ್ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ’ ಎಂದಿದೆ ಚಿತ್ರತಂಡ.

ನಿರ್ದೇಶಕ ರಾಜೀವ್‌ ಚಂದ್ರಕಾಂತ್, ‘ವಿಲನ್‌ಗೋಸ್ಕರವೇ ಈ ಕಥೆ ಬರೆದಿರುವುದು ವಿಶೇಷ. ಕಥೆಯ ಇನ್ನಷ್ಟು ವಿಶೇಷತೆಗಳನ್ನು ಚಿತ್ರದಲ್ಲಿ ನೋಡಿ’ ಎಂದರು. ನಾಯಕ ಪ್ರವೀಣ್, ನಾಯಕಿ ನಮ್ರತಾ ಅಗಸಿಮನಿ, ಸಂಗೀತ ಸಂಯೋಜಕ ಕೆ.ಎಂ.ಇಂದ್ರ ಚಿತ್ರತಂಡದಲ್ಲಿದ್ದಾರೆ. ತಾರಾಗಣದಲ್ಲಿ ಗಣೇಶ್‌ರಾವ್, ಬೆನಕ ನಂಜಪ್ಪ, ರಕ್ಷಿತ್, ನಂಜುಂಡ, ನಾಗಾವಿಜಯ್, ಶಾರುಣ್‌ ಲೋಕೇಶ್, ಗಾಯಿತ್ರಿ, ಸೆಲ್ವಿ, ಬೇಬಿಮಾರಿಷ ನಟಿಸಿದ್ದಾರೆ. ಸಲಗ ಸೂರಿ ಈ ಚಿತ್ರದ ನಿರ್ಮಾಪಕರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.