ADVERTISEMENT

ಟ್ರೇಲರ್ ಬಿಡುಗಡೆ: 'ಭೋಲಾ' ಸಿನಿಮಾದಲ್ಲಿ ಅಜಯ್ ದೇವಗನ್ ಅಬ್ಬರ!

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2023, 16:15 IST
Last Updated 6 ಮಾರ್ಚ್ 2023, 16:15 IST
ಪೋಸ್ಟರ್‌
ಪೋಸ್ಟರ್‌   

ಮುಂಬೈ: ಬಾಲಿವುಡ್ ನಟ ಅಜಯ್ ದೇವಗನ್ ಅವರ ಬಹುನಿರೀಕ್ಷಿತ 'ಭೋಲಾ' ಸಿನಿಮಾದ ಟ್ರೇಲರ್ ಸೋಮವಾರ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿಕೊಂಡಿರುವ ಅಜಯ್‌ ದೇವಗನ್‌, ‘ಯುದ್ಧಗಳನ್ನು ಆತ್ಮಬಲದಿಂದ ಗೆಲ್ಲಬೇಕೇ ಹೊರತು ಶಸ್ತ್ರಾಸ್ತ್ರ ಮತ್ತು ಪಡೆಗಳಿಂದಲ್ಲ‘ ಎಂದು ಬರೆದುಕೊಂಡಿದ್ದಾರೆ.

'ಭೋಲಾ‘ ಟ್ರೇಲರ್‌ಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಟ್ರೇಲರ್‌ ನೋಡಿರುವ ಅಭಿಮಾನಿಗಳು ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ನೆಟ್ಟಿಗರೊಬ್ಬರು ಪ್ರತಿ ಫ್ರೇಮ್ ಕೂಡ ಅದ್ಭುತವಾಗಿದೆ! ಈ ಚಿತ್ರ ಬ್ಲಾಕ್ ಬಸ್ಟರ್ ಎಂದು ಬರೆದಿದ್ದಾರೆ. ನಟ ಅಭಿಷೇಕ್ ಬಚ್ಚನ್ ಕೂಡ ಕಮೆಂಟ್ ಮಾಡಿದ್ದು, ಫೈರ್ ಎಮೋಜಿ ಕಳುಹಿಸಿದ್ದಾರೆ.

ADVERTISEMENT

ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿ 7 ಗಂಟೆಗಳಲ್ಲಿ 45 ಲಕ್ಷ ಜನರು ಟ್ರೇಲರ್‌ ವೀಕ್ಷಣೆ ಮಾಡಿದ್ದಾರೆ. ಭೋಲಾ ಸಿನಿಮಾ ಜೈಲಿನಿಂದ ಬಿಡುಗಡೆ ಆಗಿರುವ ಕೈದಿ ಮತ್ತು ಅನಾಥ ಹುಡುಗಿಯ ಕಥೆ ಹೇಳಲಿದೆ ಎಂದು ಚಿತ್ರತಂಡ ಹೇಳಿದೆ.

ಅಜಯ್ ದೇವಗನ್, ಟಬು ಮತ್ತು ದಕ್ಷಿಣ ನಟಿ ಅಮಲಾ ಪೌಲ್, ಸಂಜಯ್ ಮಿಶ್ರಾ, ದೀಪಕ್ ದೊಬ್ರಿಯಾಲ್ ರಾಯ್ ನಟಿಸಿದ್ದಾರೆ. ತಮಿಳಿನ ಲೋಕೇಶ್ ಕನಕರಾಜ್ ನಿರ್ದೇಶನದ ತಮಿಳು ಬ್ಲಾಕ್‌ಬಸ್ಟರ್ ಚಿತ್ರ 'ಕೈತಿ'ನ ಅಧಿಕೃತ ರಿಮೇಕ್ ಆಗಿದೆ ಬೋಲಾ ಸಿನಿಮಾ. ಚಿತ್ರವನ್ನು ಅಜಯ್ ದೇವಗನ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರ ಮಾರ್ಚ್ 30ರಂದು ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.